30 Dec 2015

2016 ಹೊಸ ವರುಷದ ಶುಭಾಶಯಗಳು


PTA EXECUTIVE COMMITEE MEETING

PTA  EXECUTIVE COMMITEE  MEETING  CONDUCTED ON 30/12/2015
DISCUSSED  ABOUT THE IMPROVEMENT OF SSLC RESULT .DECIDED TO CONDUCT ONE DAY STUDY TOUR   DISCUSSED ABOUT THE ACTIVITIES OF SCHOOL .ALL MEMBERS PRESENTED.

25 Dec 2015

12 Oct 2015

വിളവെടുപ്പ്

                                                     വിളവെടുപ്പ് 

          അദ്യാപകരും വിദ്യാർഥികളും സ്കൂളിന്റെ  പരിസരങ്ങളിൽ മത്തൻ,കുമ്പളം,ബസള,പപ്പായ,വാഴക്ക മുതലായവ കൃഷി ചെയ്തു വരുന്നു അതിനാൽ രാസ വളങ്ങൾ ഉപയോഗിക്കാത്ത തികച്ചും ജൈവ കൃഷിയിലൂടെ ഉൽപ്പാദിപ്പിച്ച പച്ചകറികൾ സ്കൂളിലെ ഉച്ച ഭക്ഷണത്തിന് ഉപയോഗിക്കാൻ സാധിക്കുന്നു.    

13 Sept 2015

15 Aug 2015

ಸೂರಂಬೈಲು ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ.
 
ಜಿ.ಎಚ್.ಎಸ್. ಸೂರಂಬೈಲು ಶಾಲೆಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪುತ್ತಿಗೆ ಗ್ರಾಮ ಪಂಚಾಯತಿನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್ ಧ್ವಜಾರೋಹಣ ಮಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ದಯಾನಂದ ಪೆರ್ಣೆ ವಹಿಸಿದ್ದರು.ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್, ಸುಜಾತಾ ಪೆರ್ಣೆ,ಹಮೀದ್ ಸೀತಾಂಗೋಳಿ,ಗೋಪಾಲಕೃಷ್ಣ ಪೆರ್ಣೆ, ಸುಬ್ರಹ್ಮಣ್ಯ ಭಟ್ ಮತ್ತು ಗೀತಾ ಶುಭಾಶಂಸನೆಗೈದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ ಶಶಿಕಲಾ ಸಿ.ಎಚ್. ವಂದಿಸಿದರು. ರಾಜೇಶ್ ನಿರೂಪಿಸಿದರು.ಉದ್ಘಾಟನಾ ಸಮಾರಂಭದ ಬಳಿಕ ಮಕ್ಕಳಿಂದ ದೇಶಭಕ್ತಿ ಗಾಯನ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.






 

13 Aug 2015

സ്വാതന്ദ്ര്യ ദിന ആശംസകൾ 


28 Jul 2015


28-07-2015
 ಕಲಾಂ ಅವರಿಗೆ ಭಾವಪೂರ್ಣ ನಮನ.

ಸೂರಂಬೈಲುಃ ಜು.28, ಭಾರತ ರತ್ನ ಡಾ/.ಪಿ.ಜೆ.ಅಬ್ದುಲ್ ಕಲಾಂ ನಮ್ಮನ್ನಗಲಿದರೂ ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯವಾಗಿದೆ. ಹಿರಿಯರಿಗೆ ಹಿರಿಯಣ್ಣನಾಗಿ ಕಿರಿಯರಿಗೆ ಚಿಣ್ಣನಾಗಿ , ಕಲಿಯುವ ವಿದ್ಯಾರ್ಥಿಗಳಿಗೆ ಪ್ರಬುದ್ಧ ಗುರುವಾಗಿ ಎಲ್ಲರಿಗೂ ನೆರವಾಗುವ ಅವರ ಗುಣ ಇಂದಿನ ಜನತೆಯಲ್ಲಿ ಸ್ಥಿರಸ್ಥಾಯಿಯಾಗಲಿ, ಶ್ರೀಯುತರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಮತ್ತು ಅವರ ಆದರ್ಶಗಳನ್ನು ಅನುಸರಿಸುವ ಸಾಮರ್ಥ್ಯವನ್ನು ದೇವರು ಅನುಗ್ರಹಿಸಲಿ ಎ೦ದು ಸೂರಂಬೈಲು ಶಾಲೆಯಲ್ಲಿ ಪ್ರಾರ್ಥಿಸಲಾಯಿತು. ಶೋಕ ಸಂದೇಶ ಸಭೆಯನ್ನು ಉದ್ದೇಶಿಸಿ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಮತ್ತು ರಾಜು ಕೆ ಮಾತನಾಡಿದರು. ಬಳಿಕ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ ಶಾಲಾಮಟ್ಟದ ಚಿತ್ರರಚನಾ ಶಿಬಿರದ ಉದ್ಘಾಟನೆ ನಡೆಯಿತು. ಶಶಿಕಲಾ ಸಿ.ಎಚ್, ಪಾರ್ವತಿ ಕೆ, ರತೀಶ್, ಶಕುಂತಲಾ ಕೆ, ಕಿರಣ್ ಕೆ ಉಪಸ್ಥಿತರಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಬಿನು ಕೆ ವಂದಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಸ್.ಬಿ.ಕೋಳಾರಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

27 Jul 2015


Using the letters in the word “Disappointment” ,form all possible words.
Disappointment
And,Ant,An,Appointment,As,DoDon't,Did,Done,Date,End,Eat,Is,In, It,Man,Me,Mat,Mad,Men
Maintain,Moon,Meant,Map,Met
Net,Nine,Name,No,Not,Nest,Noon,On,One,Ointment,Point,Pot
Pen,Pet,Pin,Pit,Pond,Pant,Paint
Pass,Sat,Sit,Son,Side,Said,Seat
Seen,Stand,Stood,See,Soon,Seed
Top,Tip,To,Ten,Tin,Tent,Time,
Tit,Tat,Tape,Tap

25 Jul 2015

മച്ചിങ്ങ കൊണ്ടുള്ള കളിപ്പാട്ടങ്ങൾ.അനന്യ ആനന്ദ്.രണ്ടാം തരം ബി.ജി.എസ്.ബി.എസ്.സൂരംബയൽ.



15-07-2015
ಸಮವಸ್ತ್ರ ವಿತರಣೆ.
ಸೂರಂಬೈಲುಃ ಜು.25, ಶಾಲೆಯ ಚಟುವಟಿಕೆಗಳು ಮಕ್ಕಳಿಗೆ ಫಲಪ್ರದವಾಗಿ ಸಿಗಬೇಕಾದರೆ ಹೆತ್ತವರ ಸಹಕಾರ ಅತೀ ಅಗತ್ಯವಾಗಿದೆ.ಇಂದಿನ ಕಲಿಕಾ ಪದ್ಧತಿಯಲ್ಲಿ ಮಕ್ಕಳಿಗೆ ಅನುಭವವೇ ಶಿಕ್ಷಣವಾಗಿದೆ. ಇಂತಹ ಕಲಿಕೆ ಅನುಭವವನ್ನು ನೀಡುವಲ್ಲಿ ಶಾಲೆಯು ಸಫಲವಾಗಬೇಕಾದರೆ ರಕ್ಷಕರು ಶಾಲೆಯ ಚಟುವಟಿಕೆಗಳಿಗೆ ಪೂರಕವಾದ ವಿಚಾರಗಳನ್ನು ಒದಗಿಸಲು ಮಂದಾಗಬೇಕು. ಇದಕ್ಕಾಗಿ ತರಗತಿ ರಕ್ಷಕರ ಸಭೆಯು ಅನಿವಾರ್ಯವಾಗಿದೆ. ಘಟಕ ಮೌಲ್ಯಮಾಪನ, ನಿರಂತರ ಮೌಲ್ಯನಿರ್ಣಯಗಳಿಗೆ ಪೂರಕ ಮಾಹಿತಿ ಕಲೆಹಾಕಲು ಅನಿವಾರ್ಯವಾಗಿರುವ ಇಂತಹ ಸಭೆಗಳಲ್ಲಿ ರಕ್ಷಕರು ಭಾಗವಹಿಸಬೇಕು ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನೀಡುವ ಸಮವಸ್ತ್ರ ವಿತರಣೆ ಮತ್ತು ತರಗತಿ ರಕ್ಷಕರ ಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು. ಎ೦.ಪಿ.ಟಿ.. ಅಧ್ಯಕ್ಷೆ ಸುಜಾತ ಪೆರ್ಣೆ, ದಯಾನಂದ ಪೆರ್ಣೆ, ರಮೇಶ ಮುಖಾರಿಕಂಡ,ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ಕಿರಣ್ ಉಪಸ್ಥಿತರಿದ್ದರು. ಮನೋಜ್ ವಿ ಮತ್ತು ಸುಬ್ರಹ್ಮಣ್ಯ ಭಟ್ ಕೆ ತರಗತಿ ಪಿ.ಟಿ..ಯ ಕುರಿತು ಆಶಯ ಭಾಷಣ ಮಾಡಿದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ, ಸ್ಟಾಫ್ ಸೆಕ್ರಟರಿ ಶಶಿಕಲಾ ಸಿ.ಎಚ್. ವಂದಿಸಿದರು.ನಂತರ ಪ್ರತಿ ತರಗತಿಗಳಲ್ಲಿ ರಕ್ಷಕರ ಸಭೆ ನಡೆಯಿತು. ಅಧ್ಯಕ್ಷರ ಸಹಿತ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



7 Jul 2015

07-07-2015
ಕಾವೇರಿಕಾನ ತೋಟದಲ್ಲಿ ಸೂರಂಬೈಲು ಶಾಲೆಯ ಮಕ್ಕಳು.
 
ನಮ್ಮ ದೇಶವು ಕೃಷಿ ಪ್ರಧಾನವಾದ ದೇಶವಾಗಿದೆ. ಕೃಷಿ ಮಾಡುವುದರಿಂದ ಕೈಗಾರಿಕೆಗಳಿಗೆ ಬೇಕಾದ ಕಚ್ಛಾವಸ್ತುಗಳು ಸಿಗುತ್ತವೆ. ಕೃಷಿ ಸಮೃದ್ಧವಾಗಬೇಕಾದರೆ ಆಸಕ್ತಿ ಮುಖ್ಯವಾಗಿದೆ. ಹೊಸ ಹೊಸ ಕೃಷಿತಂತ್ರಜ್ಞಾನಗಳನ್ನು ಕರಗತಮಾಡುವ ಗುಣವಿರುವ ಕೃಷಿಕರಿಗೆ ಕೃಷಿ ಯಾವತ್ತೂ ಹೊರೆಯಾಗದು. ಉತ್ತಮ ಬೀಜಗಳ ಆಯ್ಕೆ, ಸಸ್ಯಗಳ ಪೋಷಣೆ ಮತ್ತು ನಿರ್ವಹಣೆ ಕೃಷಿಯ ಪ್ರಮುಖವಾದ ವಿಚಾರಗಳಾಗಿವೆ. ಇವು ಮೂರು ಒಂದಕ್ಕೊಂದು ಪೂರಕವೆನಿಸಿದಾಗ ಕೃಷಿ ಕೆಲಸ ಹಗುರವೆನಿಸುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಕಸಿಕಟ್ಟುವಿಕೆ ಆಗಿದೆ. ಕಸಿಕಟ್ಟಿ ಹೊಸ ಸಸ್ಯ ಮಾಡುವುದರಿಂದ ಬೇಗನೆ ಬೆಳವಣಿಗೆ ಉಂಟಾಗುತ್ತದೆ, ಉತ್ತಮ ತಳಿಯ ಗಿಡಗಳನ್ನು ತಯಾರಿಸಬಹುದಾಗಿದೆ.ಬೇಗನೆ ಫಸಲು ಕೈಸೇರುವುದು. ಕಸಿಕಟ್ಟುವ ವಿಜ್ಞಾನ ಕೃಷಿಲೋಕದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಎ೦ದು ಕಾವೇರಿಕಾನ ಶಂಕರ ಭಟ್ ನುಡಿದರು. ಅವರು ಸೂರಂಬೈಲು ಶಾಲೆಯ ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ತಿಳುವಳಿಕಾ ತರಗತಿ ನಡೆಸಿ ಕಸಿಕಟ್ಟುವ ಪ್ರಾತ್ಯಕ್ಷಿಕೆಯನ್ನು ಮಾಡಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳ ಅನೇಕ ಸಂಶಯಗಳನ್ನು ನಿವಾರಿಸಿದ್ದಲ್ಲದೆ ಕೃಷಿಯ ಕುರಿತಾದ ಅನೇಕ ಮಾಹಿತಿಗಳನ್ನು ನೀಡಿದರು. ಕೆಲವು ಸಸ್ಯಗಳನ್ನು ಮಕ್ಕಳಿಗೆ ನೀಡಿ ಅವುಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು. ಉಪಾಹಾರ ವಿತರಣೆಯ ಬಳಿಕ ಮಕ್ಕಳ ಪ್ರತಿನಿಧಿಯಾಗಿ ಯಕ್ಷಿತಾ ಧನ್ಯವಾದ ನೀಡಿದಳು. ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಮತ್ತು ಶಶಿಕಲಾ ಸಿ.ಎಚ್ ನೇತೃತ್ವ ನೀಡಿದರು.






26 Jun 2015

Class Room Inauguration

  2014-15 അധ്യന വർഷത്തിൽ SSA അനുവദിച്ച ക്ലാസ് റൂമിന്റെ ഉത്ഘാടനം പുത്തിഗെ ഗ്രാമ പഞ്ചായത്ത്‌ വിദ്യാഭാസ സ്റാന്റിംഗ് കമ്മറ്റി ചെയർമാൻ ശ്രീ: ജയന്ത പാട്ടാളി യുടെ അധ്യക്ഷതയിൽ പഞ്ചായത്ത്‌  പ്രസിഡണ്ട്‌ ശ്രീ :ചനിയ പാടി നിർവഹിച്ചു.വാര്ഡ് മെമ്പർ ശ്രീമതി:ഹരിണി.ജി.കെ.നായക് ,പി .ടി.എ പ്രസിഡണ്ട്‌ ഗോപാലകൃഷ്ണ പെർനെ, ഹൈസ്കൂൾ ഹെട്മാസ്ടർ  എസ്.എൻ.റാവു,എം.പി.ടി.എ  പ്രസിഡണ്ട്‌ സുജാത പെർനെ എന്നിവർ ആശംസ അർപ്പിച്ചു. ഗിരിജ നാഥ.കെ (Headmaster GSBS Soorambail ) സ്വാഗതവും  രതീഷ്‌ മാസ്റ്റർ നന്ദിയും പറഞ്ഞു.


 

27-06-2015
ಸೂರಂಬೈಲು ಶಾಲೆಗೆ ಎಸ್.ಎಸ್..ವತಿಯಿಂದ ತರಗತಿ ಕೊಠಡಿ.
ಸೂರಂಬೈಲುಃ ಜೂ.27 ಶಾಲೆಯ ಸರ್ವತೋಮುಖ ಬಳವಣಿಗೆಗೆ ಸಮಾಜದ ಎಲ್ಲಾ ವರ್ಗದವರ ಸಹಕಾರ, ವಿವಿಧ ಇಲಾಖೆಗಳ ಪ್ರೋತ್ಸಾಹ ಮತ್ತು ಆಡಳಿತ ವರ್ಗದ ನಿರಂತರ ಸಂಪರ್ಕ ಅತೀ ಅಗತ್ಯ. ಇದರಿಂದ ಶಾಲೆಯು ಪರಿಪೂರ್ಣ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಾಗುತ್ತದೆ. ಆದುದರಿಂದ ಶಾಲೆಗಳಲ್ಲಿನ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನಿಯ ಪಾಡಿ ಯವರು ನುಡಿದರು. ಅವರು ಸೂರಂಬೈಲು ಹಿರಿಯಬುನಾದಿ ಶಾಲೆಗೆ ಎಸ್.ಎಸ್..ವತಿಯಿಂದ ನೀಡಲಾದ ತರಗತಿ ಕೊಠಡಿಯನ್ನು ಉದ್ಘಾಡಿಸಿ ಮಾತನಾಡಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಂತ ಪಾಟಾಳಿಯವರು ವಹಿಸಿದ್ದರು. ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರಿಣಿ ಜಿ.ಕೆ.ನಾಯಕ್, ಪಿ.ಟಿ..ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಜಾತ ಪೆರ್ಣೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ದಯಾನಂದ ಪೆರ್ಣೆ.ಮತ್ತು ರಮೇಶ ಮುಖಾರಿಕಂಡ  ಉಪಸ್ಥಿತರಿದ್ದರು. ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ. ಸ್ವಾಗತಿಸಿ ರತೀಶ್ ವಂದಿಸಿದರು. ರಾಜು ಕೆ. ನಿರ್ವಹಣೆ ಮಾಡಿದರು.ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಮಕ್ಕಳು ನೂರು ಶತಮಾನ ತೇರ್ಗಡೆಗೊಂಡ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಎಲ್ಲಾ ಮಕ್ಕಳಿಗೂ ಸಿಹಿತಿಂಡಿ ವಿತರಿಸಲಾಯಿತು.






20 Jun 2015

19-06-2015
ವಾಚನಾವಾರ ಮತ್ತು ಭಾಷಾ ಕ್ಲಬ್ ಗಳ ಉದ್ಘಾಟನೆ

ಸೂರಂಬೈಲು, ಪಿ.ಎನ್.ಪಣಿಕ್ಕರ್ ಇವರ ಚರಮ ದಿನವಾದ ಇಂದು ಅವರ ಸಂಸ್ಮರಣಾರ್ಥವಾಗಿ ವಾಚನಾವಾರದ ಉದ್ಘಾಟನೆ ನಡೆಯಿತು.ಇದರೊಂದಿಗೆ ವಿವಿಧ ಭಾಷಾ ಕ್ಲಬ್ ಗಳನ್ನೂ ಉದ್ಘಾಟಿಸಲಾಯಿತು.ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ವಹಿಸಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮನೋಜ್ ವಿ. ವಾಚನಾ ದಿನದ ಸಂದೇಶವನ್ನು ಹೇಳಿದರು. ಎಸ್.ಆರ್.ಜಿ. ಕನ್ವೀನರ್ ಸುಬ್ರಹ್ಮಣ್ಯ ಭಟ್, ಸ್ಟಾಫ್ ಸೆಕ್ರಟರಿ ಶಶಿಕಲಾ ಎಚ್. ಇಂಗ್ಲೀಷ್ ಕ್ಲಬ್ಬ್  ಅಧ್ಯಕ್ಷರಾದ ಲೀನಾ ಕೆ, ಹಿಂದಿ ಕ್ಲಬ್ಬ್ ಅಧ್ಯಕ್ಷರಾದ  ಲಲಿತಾ ಟೀಚರ್, ಅರೇಬಿಕ್ ಕ್ಲಬ್ಬ್ ಅಧ್ಯಕ್ಷರಾದ ಇಸ್ಮಾಯಿಲ್ ಕೆ.ಕೆ. ಮಾದಲಾದವರು ಶುಭಾಶಂಸನೆಗೈದರು. ಸಂಸ್ಕೃತ ಕ್ಲಬ್ಬ್ ಅಧ್ಯಕ್ಷರಾದ ರಾಜು ಸ್ವಾಗತಿಸಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕಿ ವಂದನಾ ವಂದಿಸಿದಳು. ಗೀತಾ ಟೀಚರ್ ನಿರೂಪಿಸಿದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಕ್ಕಳಿಂದ ಓದಿನ ಟಿಪ್ಪಣಿ ಮಂಡನೆ, ಗಟ್ಟಿ ಓದಿನ ಮಂಡನೆ, ಅಭಿನಯ ಗೀತೆ, ಕಥೆ ಮಂಡನೆ, ಜಾನಪದ ಗೀತೆ ಗಾಯನ ಮತ್ತು ವಿವಧ ವಿನೋದಾವಳಿಗಳು ನಡೆದವು. ಶತಪೂರ್ತಿ ಸಂಭ್ರಮದಲ್ಲಿರುವ ನಾಡೋಜ ಡಾ/ ಕವಿ ಕಯ್ಯಾರ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.


17 Jun 2015

വായന വാരം - ವಾಚನಾ ವಾರ

വായന വാരം - ವಾಚನಾ ವಾರ 


വായന വാരം

വായന വാരം


Puthuvayil Narayana Panicker is known as the Father of the Library  Movement in Kerala . The activities of the Kerala Grandhasala Sanghom which was initiated by P. N. Panicker ignited a popular cultural movement in Kerala at the end of which the state acquired total literacy in the 1990s.
The Grandhasala sangam which began humbly with 47 libraries in 1945, grew into a network of more than 6,000 libraries spreading over the towns and villages of Kerala. To give this activity a developmental format, he organized the Kerala Association for Non Formal Education and Development (KANFED). Together, these two Associations turned an activity into a movement which had a profound impact on the education, culture and development of Kerala.
ವಾಚನಾ ವಾರದ ಕುರಿತು
ಪುದುವಯಿಲ್ ನಾರಾಯಣ ಪಣಿಕ್ಕರ್ ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.ಕೇರಳ ಗ್ರಂಥ ಶಾಲಾ ಸಂಘದ ಚಟುವಟಿಕೆಗಳನ್ನು  ಶ್ರೀಯುತರು ಪ್ರಾರಂಭಿಸಿದರು. ಗ್ರಂಥಶಾಲಾ ಸಂಘ 1947 ರಲ್ಲಿ 47 ಗ್ರಂಥಾಲಯಗಳನ್ನು ಸ್ಥಾಪಿಸಿತು.ಬಳಿಕ 6000 ಗ್ರಂಥಾಲಯದೊಂದಿಗೆ ಕೇರಳದಾದ್ಯಂತ ಪ್ರಸಿದ್ಧಿಗೆ ಬಂತು.ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫೋರ್ಮಲ್ ಎಜುಕೇಷನ್ ಏನ್ಡ್ ಡೆವಲಪ್ ಮೆಂಟ್ (KANFED) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇವೆರಡು ಚಳವಳಿಗಳಿಂದ ಕೇರಳದಲ್ಲಿ ಸುಶಿಕ್ಷಿತರ ಮತ್ತು ಓದುಗರ ಸಂಖ್ಯೆ ಗಣನೀಯವಾಗಿ ಹೆಚ್ಚಿತು.

12 Jun 2015

ലോക ബാലവേല വിരുദ്ധ ദിനം


ലോക ബാലവേല വിരുദ്ധ ദിനം

       സൂരംബയൽ: 12/06/2015 ജി.എസ്.ബി.എസ് സൂരംബയൽ സ്കൂളിൽ കാസറഗോഡ് ചൈൽഡ് ലയിനിന്റെയും റോട്ടറി  ഇന്സ്ട്ടിടുട്ടിന്റെയും ആഭിമുക്യത്തിൽലോക ബാലവേല വിരുദ്ധ ദിനം -2015.WORLD DAY AGAINST CHILD LABOUR -2015      ആചരിച്ചു .സ്കൂൾ ഹാളിൽ നടന്ന ചടങ്ങിൽ  കോടിനേട്ടർ  ഉദയ കുമാർ .എം സ്വാഗതം ആശസിച്ചു ഹെഡ്മാസ്റ്റർ ഗിരിജാ നാഥ.കെ അദ്യഷത വഹിച്ചു Child Line  ഡയറക്ടർ അബ്ദുൽ റഹിമാൻ എ.എ (വികസന ) ഉത്ഘാടനം നിർവഹിച്ചു വിദ്യാര്തികൾക്ക് വിഡിയോ പ്രസന്റഷനോട് കൂടി പദ്മനാഭ.എം ,മുഹമ്മദ്‌ റാസി,യാക്കുബ് എന്നീ വളണ്ടിയർമാർ ക്ലാസ്സുകൾ കൈകാര്യം ചെയ്തു. സ്റ്റാഫ് സെക്രെടറി ശ്രീമതി:ശശികല.സി.എച്ച്,രാധാകൃഷ്ണ.എച്ച് എന്നിവർ ആശംസ നേർന്നു.സുബ്രമണ്യ ഭട്ട്.കെ നന്ദിയും അറിയിച്ചു. 
ವಿಶ್ವ ಬಾಲಕಾರ್ಮಿಕ ವಿರುದ್ಧ ದಿನ
        ಸೂರಂಬೈಲುಃ ಜೂನ್ ೧೨. ಜಿ.ಎಸ್.ಬಿ.ಎಸ್. ಸೂರಂಬೈಲು ಶಾಲೆಯಲ್ಲಿ ಕಾಸರಗೋಡು ಚೈಲ್ಡ್ ಲೈನ್ ಮತ್ತು ರೋಟರಿ ಕ್ಲಬ್ಬ್ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರುದ್ಧ ದಿನದ ಅಂಗವಾಗಿ ತಿಳುವಳಿಕಾ ತರಗತಿ  ನಡೆಯಿತು. ಶಾಲೆಯ ಸಭಾಂಗಣದಲ್ಲಿ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಅಧ್ಯಕ್ಷತೆ ವಹಿಸಿದ್ದರು. ಚೈಲ್ಡ್ ಲೈನ್ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಎ.ಎ.ವಿಕಸನ, ಉದ್ಘಾಟಿಸಿದರು. ಪದ್ಮನಾಭ ಎ೦, ಮೊಹಮ್ಮದ್ ರಾಸಿ, ಮದಲಾದವರು ತರಗತಿ ನಡೆಸಿದರು. ತರಗತಿಯ ನೇತೃತ್ವವನ್ನು ಉದಯಕುಮಾರ್ ವಹಿಸಿದ್ದರು.ಸ್ಟಾಫ್ ಸೆಕ್ರಟರಿ ಶಶಿಕಲಾ ಸಿ.ಎಚ್, ಸುಬ್ರಹ್ಮಣ್ಯ ಭಟ್ ಕೆ, ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.

5 Jun 2015

മരമേകട്ടെ നാടിന്നു

തണലും വന ഭംഗിയും

മനമേകട്ടെ മര്ത്യന്നു

തരു നട്ടു വളർത്തീടാൻ

ഗീത.കെ  

ലോക പരിസ്തിഥി ദിനം

ജൂണ്‍ 5 ലോക പരിസ്തിഥി  ദിനം
മുഴുവൻ വിദ്യാര്തികൾക്കും വൃക്ഷ തൈകൾ വിതരണം ചെയ്തു
സ്കൂൾ കോംബൗഡിൽ ചെടികൾ കുഴിച്ചിടുകയും .പരിസ്തിഥി   സംരക്ഷണ പ്രവര്ത്തനങ്ങല്ക്ക് തുടക്കം കുറിക്കുകയും ചെയ്തു .

05-06-2015
ಸೂರಂಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
ಸೂರಂಬೈಲುಃ- ಪರಿಸರವನ್ನು ಮತ್ತು ಜಾಗತಿಕ ತಾಪಮಾನವನ್ನು ಸಮತೋಲನದಲ್ಲಿಡುವ ಸಾಮಾರ್ಥ್ಯವಿರುವುದು ಸಸ್ಯಗಳಿಗೆ ಮಾತ್ರ. ಪ್ರತಿಯೊಂದು ಸಸ್ಯವೂ ಪರಿಸರದ ಸಮತೋಲನಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಆದುದರಿಂದ ಎಲ್ಲರೂ ತಮಗೆ ಸಿಕ್ಕಿದ ಗಿಡಗಳನ್ನು ಜತನದಿಂದ ಸಾಕಿ ಸಲಹಬೇಕು ಎ೦ದು ಸೂರಂಬೈಲು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳಿಗೆ ಅರಣ್ಯ ಇಲಾಖೆಯ ವತಿಯಿಂದ ನೀಡುತ್ತಿರುವ ಉಚಿತ ಸಸಿ ವಿತರಣೆಯನ್ನು ಉದ್ಘಾಟನೆ ಮಾಡಿ ತಿಳುವಳಿಕಾ ತರಗತಿಯನ್ನುದ್ದೇಶಿಸಿ ಮಾತನಾಡಿದರು. ಇಕೋ ಕ್ಲಬ್ಬಿನ ಸಂಚಾಲಕರಾದ ಕಿರಣ್ ಕೆ ಮತ್ತು ಕರುಣಾಕರ ರೈ, ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಶಕುಂತಲಾ ಕೆ ಶಾಲಾ ಪರಿಸರದಲ್ಲಿ ಗಿಡ ನೆಟ್ಟು ಗಿಡ ನೆಡುವ ವಿಧಾನದ ಪ್ರಾತ್ಯಕ್ಷಿಕೆಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ರಸಪ್ರಶ್ನೆ ಮತ್ತು ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು.



3 Jun 2015

2015-16 അധ്യയന വര്ഷത്തിനു തുടക്കമായി



2015-16 അധ്യയന വര്ഷത്തിനു തുടക്കമായി

    സൂരംബയൽ:ഗവ:സീനിയർ ബേസിക് സ്കൂളിൽ പുതുതായി പ്രവേശനം നേടിയ വിദ്യാർഥികൾക്ക് ഊഷ്മളമായ വരവേൽപ്പ് നല്കി.വാർഡ്‌ മെമ്പർ രക്ഷിതാക്കൾ അധ്യാപകർ നാട്ടുകാർ എന്നിവരുടെ സാന്നിധ്യത്തിൽ യുണിഫോം,ബേഗ്,പഠനോപകരണങ്ങൾ മുതലായവ നല്കി സ്വീകരിച്ചു .
      സ്കൂൾ ഹാളിൽ നടന്ന ചടങ്ങിൽ പി ടി എ പ്രസിടെണ്ടിന്റെ അധ്യക്ഷതയിൽ പുത്തിഗെ ഗ്രാമ പഞ്ചായത്ത് സ്റ്റാന്റിംഗ് കമ്മറ്റി ചെയർ പെർസൻ ശ്രീമതി:ഹരിണി ജി.കെ നായക് ഉദ്ഘാടനം നിർവഹിച്ചു.
ഹൈസ്കൂൾ ഹെഡ് മാസ്റ്റർ ശ്രീ :സത്യനാരായണ റാവു,രമേശ്‌ മുകാരികണ്ട സുജാത പെര്നെ ,ഹമീദ് സീതാൻഗോളി,ബിനു.പി എന്നിവർ ആശംസ അർപ്പിച്ചു.പുതിയ വിദ്യാര്തികൾക്ക് സ്റ്റാഫ് കൗൻസിലിന്റെ വക പഠനോപകരണങ്ങളും വിതരണം ചെയ്തു .ഹെഡ് മാസ്റ്റർ ഗിരിജാനാഥ .കെ സ്വാഗതവും കിരണ്‍ .കെ നന്ദിയും പറഞ്ഞു .മുതിര്ന്ന വിദ്യാര്തികൾ മധുരപലഹാരങ്ങളും ബലൂണുകളും നല്കി.തുടർന്ന് വർണാഭമായ ഘോഷ യാത്രയും നടത്തി.

                       





18 Mar 2015


ಎಳೆಯರ ಚಿಲಿಪಿಲಿ 2015
 ಸೂರಂಬೈಲು ಶಾಲೆಯಲ್ಲಿ ಶಾಲಾಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಂಗಮದ ಅಂಗವಾಗಿ ಎಳೆಯರ ಚಿಲಿಪಿಲಿ ಎಂಬ ಕಾರ್ಯಕ್ರಮ ಜರಗಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಕ್ಕಳಿಂದ ಕವಿತೆ. ಸಮೂಹ ಗೀತೆ, ದೇಶಭಕ್ತಿಗೀತೆ, ಕಥೆ, ಅಭಿನಯ ಗೀತೆ, ನೃತ್ಯ, ಸಮೂಹ ನೃತ್ಯ, ಮಿಮಿಕ್ರಿ,, ಏಕಪಾತ್ರಾಭಿನಯ, ನಾಟಕ ಮೊದಲಾದ ಮನೋರಂಜನೆ ಚಟುವಟಿಕೆಗಳು ನಡೆದವು. ಸುಪ್ರೀತ್ ಸ್ವಾಗತಿಸಿ ರೇಶ್ಮಾ ವಂದಿಸಿದಳು. ಯಕ್ಷಿತಾ ಪ್ರಾಸ್ತಾವಿಕ ನುಡಿದಳು.




17 Mar 2015

പഞ്ചായത്ത്‌ തല മെട്രിക് മേള  ಪಂಚಾಯತ್ ಮಟ್ಟದ ಮೆಟ್ರಿಕ್ ಮೇಳ
PANCHAYATH LEVEL METRIC MELA
പഞ്ചായത്ത്‌ തല മെട്രിക് മേള വെൽഫെർ സ്ടാണ്ടിംഗ്  കമ്മറ്റി ചെയർപെർസണ്‍ ശ്രീമതി:ഹരിണി.ജി.കെ.നായിക് ഉൽഘാടനം ചെയ്യുന്നു 
ಪುತ್ತಿಗೆ ಪಂಚಾಯತ್ ಮಟ್ಟದ ಮೆಟ್ರಿಕ್ ಮೇಳವನ್ನು ಪುತ್ತಿಗೆ ಗ್ರಾಮ ಪಂಚಾಯತಿನ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ಉದ್ಘಾಟಿಸಿದರು. 
  

പുതിഗെ ഗ്രാമ പഞ്ചായത്ത്‌ തല മെട്രിക് മേള  ജി.എസ്.ബി.എസ്.സൂരംബയൽ സ്കൂളിൽ നടന്നു.ഹെഡ്മാസ്റർ ഗിരിജാനാഥ.കെ സ്വാഗതം ആശംസിച്ചു പി.ടി.എ പ്രസിഡണ്ട്‌ ഗോപാലകൃഷ്ണ.എം അദ്യഷത വഹിച്ചു .പുതിഗെ ഗ്രാമ പഞ്ചായത്ത്‌ വെൽഫെർ സ്ടാണ്ടിംഗ്  കമ്മറ്റി ചെയർപെർസണ്‍ ശ്രീമതി:ഹരിണി.ജി.കെ.നായിക് ഉൽഘാടനം ചെയ്തു  ബിനു മാസ്റർ,ബി ആർ.സി ട്രൈനെർ സുജ എന്നിവർ സംസാരിച്ചു ആർ പിമാർ ബാലചന്ദ്രൻ മാസ്റ്റർ,ദിനേശൻ മാസ്റ്റർ,അനിത ടീച്ചർ എന്നിവർ ക്ലാസുകൾ നടത്തി.വിവിധ സ്കൂൾ കുട്ടികൾ തയ്യാറാക്കി കൊണ്ടുവന്ന അളവ് തൂക്ക വസ്തുക്കളുടെ പ്രദർശനവും ഉണ്ടായിരുന്നു.വിജയികള്ക്ക് സമ്മാനങ്ങളും ട്രോഫിയും വിതരണം ചെയ്തു. 

ಪುತ್ತಿಗೆ ಗ್ರಾಮ ಪಂಟಾಯತ್ ಮಟ್ಟದ ಮೆಟ್ರಿಕ್ ಶಿಬಿರ ಸ್ಥಳೀಯ ಜಿ.ಎಸ್.ಬಿ.ಎಸ್.ಸೂರಂಬೈಲು ಶಾಲೆಯಲ್ಲಿ ನಡೆಯಿತು. ವ್ಯವಹಾರ ಗಣಿತವನ್ನು ಕರಗತಮಾಡಿಕೊಳ್ಳಲು ಮೆಟ್ರಿಕ್ ಮೇಳದಂತಹ ಯೋಜನೆಗಳು ಪರಿಣಾಮಕಾರಿಯಾಗಿದೆ. ನಿತ್ಯ ಜೀವನದಲ್ಲಿ ಬಳಕೆಗೆ ಬರುವ ಅನೇಕ ಅವಕಾಶಗಳಿಗೆ ತರಬೇತಿ ಸಿಗುವ ಇಂತಹ ಮೆಟ್ರಿಕ್ ಮೇಳಗಳು ಶಾಲಾ ಮಟ್ಟದಲ್ಲಿ ನಡೆಯುವುದರಿಂದ ಮಕ್ಕಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಮೂಡುವುದಲ್ಲದೆ ಕಲಿತ ಜ್ಞಾನವನ್ನು ಪ್ರಯೋಗಿಸಲು ಅವಕಾಶವೂ ಸಿಗುತ್ತದೆ. ಆದುದರಿಂದ ಎಲ್ಲಾ ಮಕ್ಕಳಿಗೂ ಇಂತಹ ಮೇಳದಲ್ಲಿ ಭಾಗವಹಿಸಲು ಅವಕಾಶ ಸಿಗಲಿ, ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ತಮಗೆ ಸಿಕ್ಕಿದ ಅನುಭವವನ್ನು ತಮ್ಮ ಸಹಪಾಠಿಗಳಿಗೆ ಹಂಚಬೇಕು ಎಂದು  ಪುತ್ತಿಗೆ ಪಂಚಾಯತಿನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸ್ಥಳೀಯ ಸೂರಂಬೈಲು ಶಾಲೆಯಲ್ಲಿ ಪಂಚಾಯತು ಮಟ್ಟದ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ. ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು.ಬಿನು, ಪಾರ್ವತಿ ಕೆ, ದಿನೇಶ ಬಿ ಮತ್ತು ಅನಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ, ಬಿ.ಆರ್.ಸಿ.ತರಬೇತುದಾರರಾದ ಸುಜ ವಂದಿಸಿದರು.ರಾಜು ನಿರೂಪಿಸಿದರು. ಉದ್ಘಾಟನೆಯ ನಂತರ  ಶಿಬಿರ ಪ್ರಾರಂಭವಾಯಿತು.         ಸುಬ್ರಹ್ಮಣ್ಯ ಭಟ್ ಕೆ ಮತ್ತು ಬಾಲಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದರು.



ತೂಕ, ಉದ್ದ,ಸಮಯ ಮತ್ತು ಹಿಡಿವು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ.

16 Mar 2015