28 Jul 2015


28-07-2015
 ಕಲಾಂ ಅವರಿಗೆ ಭಾವಪೂರ್ಣ ನಮನ.

ಸೂರಂಬೈಲುಃ ಜು.28, ಭಾರತ ರತ್ನ ಡಾ/.ಪಿ.ಜೆ.ಅಬ್ದುಲ್ ಕಲಾಂ ನಮ್ಮನ್ನಗಲಿದರೂ ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯವಾಗಿದೆ. ಹಿರಿಯರಿಗೆ ಹಿರಿಯಣ್ಣನಾಗಿ ಕಿರಿಯರಿಗೆ ಚಿಣ್ಣನಾಗಿ , ಕಲಿಯುವ ವಿದ್ಯಾರ್ಥಿಗಳಿಗೆ ಪ್ರಬುದ್ಧ ಗುರುವಾಗಿ ಎಲ್ಲರಿಗೂ ನೆರವಾಗುವ ಅವರ ಗುಣ ಇಂದಿನ ಜನತೆಯಲ್ಲಿ ಸ್ಥಿರಸ್ಥಾಯಿಯಾಗಲಿ, ಶ್ರೀಯುತರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಮತ್ತು ಅವರ ಆದರ್ಶಗಳನ್ನು ಅನುಸರಿಸುವ ಸಾಮರ್ಥ್ಯವನ್ನು ದೇವರು ಅನುಗ್ರಹಿಸಲಿ ಎ೦ದು ಸೂರಂಬೈಲು ಶಾಲೆಯಲ್ಲಿ ಪ್ರಾರ್ಥಿಸಲಾಯಿತು. ಶೋಕ ಸಂದೇಶ ಸಭೆಯನ್ನು ಉದ್ದೇಶಿಸಿ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಮತ್ತು ರಾಜು ಕೆ ಮಾತನಾಡಿದರು. ಬಳಿಕ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ ಶಾಲಾಮಟ್ಟದ ಚಿತ್ರರಚನಾ ಶಿಬಿರದ ಉದ್ಘಾಟನೆ ನಡೆಯಿತು. ಶಶಿಕಲಾ ಸಿ.ಎಚ್, ಪಾರ್ವತಿ ಕೆ, ರತೀಶ್, ಶಕುಂತಲಾ ಕೆ, ಕಿರಣ್ ಕೆ ಉಪಸ್ಥಿತರಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಬಿನು ಕೆ ವಂದಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಸ್.ಬಿ.ಕೋಳಾರಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment