26 Jun 2015

Class Room Inauguration

  2014-15 അധ്യന വർഷത്തിൽ SSA അനുവദിച്ച ക്ലാസ് റൂമിന്റെ ഉത്ഘാടനം പുത്തിഗെ ഗ്രാമ പഞ്ചായത്ത്‌ വിദ്യാഭാസ സ്റാന്റിംഗ് കമ്മറ്റി ചെയർമാൻ ശ്രീ: ജയന്ത പാട്ടാളി യുടെ അധ്യക്ഷതയിൽ പഞ്ചായത്ത്‌  പ്രസിഡണ്ട്‌ ശ്രീ :ചനിയ പാടി നിർവഹിച്ചു.വാര്ഡ് മെമ്പർ ശ്രീമതി:ഹരിണി.ജി.കെ.നായക് ,പി .ടി.എ പ്രസിഡണ്ട്‌ ഗോപാലകൃഷ്ണ പെർനെ, ഹൈസ്കൂൾ ഹെട്മാസ്ടർ  എസ്.എൻ.റാവു,എം.പി.ടി.എ  പ്രസിഡണ്ട്‌ സുജാത പെർനെ എന്നിവർ ആശംസ അർപ്പിച്ചു. ഗിരിജ നാഥ.കെ (Headmaster GSBS Soorambail ) സ്വാഗതവും  രതീഷ്‌ മാസ്റ്റർ നന്ദിയും പറഞ്ഞു.


 

27-06-2015
ಸೂರಂಬೈಲು ಶಾಲೆಗೆ ಎಸ್.ಎಸ್..ವತಿಯಿಂದ ತರಗತಿ ಕೊಠಡಿ.
ಸೂರಂಬೈಲುಃ ಜೂ.27 ಶಾಲೆಯ ಸರ್ವತೋಮುಖ ಬಳವಣಿಗೆಗೆ ಸಮಾಜದ ಎಲ್ಲಾ ವರ್ಗದವರ ಸಹಕಾರ, ವಿವಿಧ ಇಲಾಖೆಗಳ ಪ್ರೋತ್ಸಾಹ ಮತ್ತು ಆಡಳಿತ ವರ್ಗದ ನಿರಂತರ ಸಂಪರ್ಕ ಅತೀ ಅಗತ್ಯ. ಇದರಿಂದ ಶಾಲೆಯು ಪರಿಪೂರ್ಣ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಾಗುತ್ತದೆ. ಆದುದರಿಂದ ಶಾಲೆಗಳಲ್ಲಿನ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನಿಯ ಪಾಡಿ ಯವರು ನುಡಿದರು. ಅವರು ಸೂರಂಬೈಲು ಹಿರಿಯಬುನಾದಿ ಶಾಲೆಗೆ ಎಸ್.ಎಸ್..ವತಿಯಿಂದ ನೀಡಲಾದ ತರಗತಿ ಕೊಠಡಿಯನ್ನು ಉದ್ಘಾಡಿಸಿ ಮಾತನಾಡಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಂತ ಪಾಟಾಳಿಯವರು ವಹಿಸಿದ್ದರು. ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರಿಣಿ ಜಿ.ಕೆ.ನಾಯಕ್, ಪಿ.ಟಿ..ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಜಾತ ಪೆರ್ಣೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ದಯಾನಂದ ಪೆರ್ಣೆ.ಮತ್ತು ರಮೇಶ ಮುಖಾರಿಕಂಡ  ಉಪಸ್ಥಿತರಿದ್ದರು. ಹಿರಿಯ ಬುನಾದಿ ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ. ಸ್ವಾಗತಿಸಿ ರತೀಶ್ ವಂದಿಸಿದರು. ರಾಜು ಕೆ. ನಿರ್ವಹಣೆ ಮಾಡಿದರು.ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಮಕ್ಕಳು ನೂರು ಶತಮಾನ ತೇರ್ಗಡೆಗೊಂಡ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಎಲ್ಲಾ ಮಕ್ಕಳಿಗೂ ಸಿಹಿತಿಂಡಿ ವಿತರಿಸಲಾಯಿತು.






No comments:

Post a Comment