5 Jun 2015

ലോക പരിസ്തിഥി ദിനം

ജൂണ്‍ 5 ലോക പരിസ്തിഥി  ദിനം
മുഴുവൻ വിദ്യാര്തികൾക്കും വൃക്ഷ തൈകൾ വിതരണം ചെയ്തു
സ്കൂൾ കോംബൗഡിൽ ചെടികൾ കുഴിച്ചിടുകയും .പരിസ്തിഥി   സംരക്ഷണ പ്രവര്ത്തനങ്ങല്ക്ക് തുടക്കം കുറിക്കുകയും ചെയ്തു .

05-06-2015
ಸೂರಂಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
ಸೂರಂಬೈಲುಃ- ಪರಿಸರವನ್ನು ಮತ್ತು ಜಾಗತಿಕ ತಾಪಮಾನವನ್ನು ಸಮತೋಲನದಲ್ಲಿಡುವ ಸಾಮಾರ್ಥ್ಯವಿರುವುದು ಸಸ್ಯಗಳಿಗೆ ಮಾತ್ರ. ಪ್ರತಿಯೊಂದು ಸಸ್ಯವೂ ಪರಿಸರದ ಸಮತೋಲನಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಆದುದರಿಂದ ಎಲ್ಲರೂ ತಮಗೆ ಸಿಕ್ಕಿದ ಗಿಡಗಳನ್ನು ಜತನದಿಂದ ಸಾಕಿ ಸಲಹಬೇಕು ಎ೦ದು ಸೂರಂಬೈಲು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳಿಗೆ ಅರಣ್ಯ ಇಲಾಖೆಯ ವತಿಯಿಂದ ನೀಡುತ್ತಿರುವ ಉಚಿತ ಸಸಿ ವಿತರಣೆಯನ್ನು ಉದ್ಘಾಟನೆ ಮಾಡಿ ತಿಳುವಳಿಕಾ ತರಗತಿಯನ್ನುದ್ದೇಶಿಸಿ ಮಾತನಾಡಿದರು. ಇಕೋ ಕ್ಲಬ್ಬಿನ ಸಂಚಾಲಕರಾದ ಕಿರಣ್ ಕೆ ಮತ್ತು ಕರುಣಾಕರ ರೈ, ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಶಕುಂತಲಾ ಕೆ ಶಾಲಾ ಪರಿಸರದಲ್ಲಿ ಗಿಡ ನೆಟ್ಟು ಗಿಡ ನೆಡುವ ವಿಧಾನದ ಪ್ರಾತ್ಯಕ್ಷಿಕೆಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ರಸಪ್ರಶ್ನೆ ಮತ್ತು ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು.



No comments:

Post a Comment