29 Dec 2014

പുതുവത്സരാശംസകൾ
ಹೊಸ ವರ್ಷದ ಶುಭಾಶಯಗಳು


happy new year 2015 എന്നതിനായുള്ള ഇമേജ് ഫലം 

27 Dec 2014

22 Dec 2014

പുതു വർഷാശംസകൾ


സ്നേഹത്തിന്റെയും സൗഹാർദതിന്റെയും
 ക്രിസ്തുമസ്പുതു  വർഷാശംസകൾ   
  

20 Dec 2014


20-12-2014
 ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಗಡಿನಾಡ ಘಟಕ
ಸೂರಂಬೈಲು ಶಾಲೆಯಲ್ಲಿ ಕವಿಕಾವ್ಯ ಸಂವಾದ




 
ಸೂರಂಬೈಲು, ಸಾಹಿತ್ಯಾಸಕ್ತಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಪ್ರಬಲ ಮಾಧ್ಯಮವಾಗಿದೆ. ಎಳೆವೆಯಲ್ಲಿಯೇ ಒಳ್ಳೊಳ್ಳೆಯ ಸಾಹಿತ್ಯಗಳನ್ನು ಓದುವುದು, ವಿಮರ್ಶಿಸುವುದರಿಂದ ನಮ್ಮ ಚಿಂತನಾ ಸಾಮರ್ಥ್ಯ ಹೆಚ್ಚುವುದು. ಉತ್ತಮ ಓದುವಿಕೆಯಿಂದ ಸಮಾಜ ಮೆಚ್ಚುವಂತೆ ವ್ಯವಹರಿಸುವ ಗುಣವೂ ಮೈಗೂಡುತ್ತದೆ. ಜತೆಗೆ ಸಾಹಿತ್ಯ ರಚನೆಗೆ ಪ್ರೇರಣೆಯೂ ದೊರೆಯುತ್ತದೆ. ಆದುದರಿಂದ ಮಕ್ಕಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು ಹೆಚ್ಚು ಹೆಚ್ಚು ಸಿಗುವಂತಾಗಲಿ, ಎ೦ದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿಯವರು ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಕಾಸರಗೋಡು ಘಟಕದ ವತಿಯಿಂದ ಜರಗಿದ ಕವಿಕಾವ್ಯ ಸಂವಾದದ ಉದ್ಘಾಟನೆಗೈದು ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್. ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್, ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆ, ಸೂರಂಬೈಲು ಶಾಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ,ಮಕ್ಕಳ ಸಾಹಿತ್ಯಸಂಗಮ ಕೇಂದ್ರ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸರಾವ್ ಮತ್ತು ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು.ಹಿರಿಯ ಶಿಕ್ಷಣ ತಜ್ಞರಾದ ವಿ.ಬಿ.ಕುಳಮರ್ವ ಪ್ರಸ್ತಾವನಾ ಭಾಷಣ ಮಾಡಿದರು.ಕಾರ್ಯದರ್ಶಿಗಳಾದ ಬಾಲ ಮಧುರಕಾನನ ಸ್ವಾಗತಿಸಿ, ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ಕುಮಾರಿ ಚೈತ್ರಾ ಎಸ್ ನಿರೂಪಣೆಗೈದಳು.
ಉದ್ಘಾಟನೆಯ ಬಳಿಕ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಕ್ಕಳಿಂದ ಮೂಡಿಬಂದ ಕೆಲವು ಪ್ರಧಾನ ಪ್ರಶ್ನೆಗಳು ಇಂತಿದ್ದವು.
*ಬಾಲ್ಯದಲ್ಲಿ ನಿಮಗೆ ಸಾಹಿತ್ಯಾಭಿರುಚಿ ಉಂಟಾದ ಬಗೆ ಹೇಗೆ?
    * ಸಾಹಿತ್ಯ ರಚನೆಗೆ ಸ್ಪೂರ್ತಿ ಯಾರು?
    * ನಿಮ್ಮ ಸಾಹಿತ್ಯವು ಮೊದಲಿಗೆ ಪ್ರಕಟವಾದಾಗ ನಿಮಗಾದ ಅನುಭವವೇನು ?
    *ವೃತ್ತಿಜೀವನಕ್ಕೆ ಸೇರಿದಾಗ ನಿಮ್ಮ ಸಾಹಿತ್ಯದ ಒಲವನ್ನು ಉಳಿಸಿಕೊಂಡದ್ದು ಹೇಗೆ?
    * ವೃತ್ತಿ ಜೀವನದಲ್ಲಿ ಸಾಹಿತ್ಯ ಪ್ರೇರಣೆಗೆ ಸಂಬಂಧಿಸಿದ ಘಟನೆಗಳು ಏನಾದರೂ ಇದೆಯೇ?
    * ನೀವು ಆದರ್ಶಪ್ರಾಯರೆಂದು ಗುರುತಿಸುವ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ?
* ನಿಮ್ಮ ಸಾಹಿತ್ಯ ಒಡನಾಡಿಗಳು ಯಾರುಯಾರು?
*ಪುಸ್ತಕ ಪ್ರಕಟನೆಯ ವಿಶೇಷ ಅನುಭವಗಳು ಏನಾದರೂ ಇದೆಯೇ?
* ಸಾಹಿತ್ಯ ಪ್ರಚಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು?
* ನಿವೃತ್ತಿಯ ನಂತರ ನಿಮ್ಮ ಸಾಹಿತ್ಯ ರಚನೆ ಹೇಗಿದೆ?
*ನೀವು ಪ್ರಕಟಿಸಿದ ಸಾಹಿತ್ಯ ಪ್ರಕಾರಗಳು ಯಾವುವು?
*ಅಪ್ರಕಟಿತ ಕೃತಿಗಳು ಯಾವುದಾದರೂ ಇದೆಯೇ?
*ಅಂಕಣ ಬರಹಗಳನ್ನು ಯಾವ ಯಾವ ಪತ್ರಿಕೆಗಳಿಗೆ ಬರೆಯುತ್ತೀರಿ?
*ಸಾಹಿತ್ಯ ಸೇವೆಯ ಮುಂದಿನ ಯೋಜನೆಗಳೇನು?
*ವಿದ್ಯಾರ್ಥಿಗಳಿಗೆ ನೀವು ನೀಡುವ ಸಂದೇಶ ಮತ್ತು ಮಾರ್ಗದರ್ಶನವೇನು?
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಾಹಿತಿಗಳು ತುಂಬಾ ತಾಳ್ಮೆಯಿಂದಲೆ ಉತ್ತರಿಸಿದರು.

ಅಪರಾಹ್ನ ಡಾ/ ರಮಾನಂದ ಬನಾರಿಯವರೊಂದಿಗೆ ಸಾಹಿತ್ಯ, ಯಕ್ಷಗಾನ ಕಲೆಯ ಕುರಿತು ಮಕ್ಕಳು ಪ್ರಶ್ನೆ ಕೇಳಿದರು.
ಬನಾರಿಯವರು ಸಮರ್ಪಕವಾಗಿ ಉತ್ತರಿಸಿದರು. ಕಾರ್ಯಕ್ರಮದ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಜರಗಿತು. ಬನಾರಿಯವರ ಆಯ್ದ ಕವನಗಳನ್ನು ಮಹಾಜನ ಸಂಸ್ಕೃತ ವಿದ್ಯಾಲಯದ ಮಕ್ಕಳು ಮತ್ತು ಅರ್ತಿಕಜೆಯವರ ರಾಮಾಯಣದ ಕೆಲವು ಹಾಡುಗಳನ್ನು ಅನುಷಾ ಎಸ್.ಮಯ್ಯ ಹಾಡಿದರು. ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾಪತ್ರ, ಬನಾರಿಯವರ ಕೊಳಲು ಪುಸ್ತಕ ಮತ್ತು ಶಾಲೆಗಳಿಗೆ ಸ್ಮರಣಿಕೆ ನೀಡಲಾಯಿತು. ತೊಂಭತ್ತೆಂಟು ಸಾಹಿತ್ಯಾಸಕ್ತ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹರೀಶ್ ಪೆರ್ಲ, ಕೃಷ್ಣೋಜಿ ರಾವ್, ಪಾರ್ವತಿ ಕೆ, ಮೊದಲಾದವರು ಉಪಸ್ಥಿತರಿದ್ದರು.

12 Dec 2014

Exam Started

Second Terminal Examinations Started from 12/12/2014.

4 Dec 2014

വിദ്യാരംഗം

വിദ്യാരംഗം സാഹിത്യോത്സവം -2014

പ്രവര്ത്തി പരിചയ മേള

പ്രവര്ത്തി പരിചയ മേള -2014.

18 Nov 2014

സയൻസ് ഫെയർ

സയൻസ് ഫെയർ



സയൻസ് ഫെയർ ജില്ല മത്സരത്തിൽ യു.പി (സ്റ്റിൽ മോഡൽ ) വിഭാഗത്തിൽ എ ഗ്രേഡ്  അഞ്ചാം സ്ഥാനവും എൽ.പി വിഭാഗത്തിൽ (ചാര്ട്ട്  )ബി ഗ്രേഡ് ആറാം സ്ഥാനവും ലഭിച്ചു

14 Nov 2014


ശിശു ദിനം 

യു.പി.വിഭാഗം സാമൂഹ്യ ശാസ്ത്രം സ്റ്റിൽ മോഡൽ വിഭാഗത്തിൽ  ഒന്നാം സഥാനം കരസ്ഥമാക്കിയ ലാവണ്യ ,രാകേഷ്  എന്നിവർ.


എൽ.പി . മെറ്റൽ എന്ഗ്രെവിംഗ് ഒന്നാം സ്ഥാനം കരസ്ഥമാക്കിയ ജയപ്രസാദ്



എൽ.പി .വിഭാഗം സാമൂഹ്യ ശാസ്ത്രം ചാർട്ട് വിഭാഗത്തിൽ  ഒന്നാം സഥാനം കരസ്ഥമാക്കിയ നഷീദ.കെ.എസ്,മേഹരുബ എന്നിവർ. 


14-11-2014
ಮಕ್ಕಳ ದಿನಾಚರಣೆಯ ಶುಭಾಶಯಗಳು
ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಕೊಂಡಾಡುತ್ತಾರೆ. ಇಂದಿನ ಈ ಶುಭದಿನದಂದು ಎಲ್ಲರಿಗೂ ಶುಭಾಶಯಗಳು.

13 Nov 2014





                                                          13-11-2014   

   ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಾಹಿತ್ಯ ಸಂಚಿಕೆಯ ಸ್ಪರ್ಧೆಯಲ್ಲಿ ಸೂರಂಬೈಲು ಶಾಲೆಗೆ ಬಹುಮಾನ.
ಜ್ಞಾನೋದಯ ಹಿರಿಯ ಬುನಾದಿ ಶಾಲೆ ಮಾನ್ಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಾಹಿತ್ಯ ಸಂಚಿಕೆಯ ಸ್ಪರ್ಧೆಯಲ್ಲಿ ಸೂರಂಬೈಲು ಶಾಲೆ ಸಿದ್ಧಗೊಳಿಸಿದ ದರ್ಪಣ ಹಸ್ತಪತ್ರಿಕೆಯು ಪ್ರಥಮ ಸ್ಥಾನ ಗಳಿಸಿತು. ಮಕ್ಕಳ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಲು ಇಂತಹ ಹಸ್ತಪತ್ರಿಕೆಗಳು ಸಹಾಯಮಾಡುತ್ತವೆ, ಮಾಹಿತಿ ತಂತ್ರಜ್ಞಾನ ಗಳ ಭರಾಟೆಯಲ್ಲಿ ಮಕ್ಕಳ ಓದುಬರಹ ಕಡಿಮೆಯಾಗುವ ಈ ಸಮಯದಲ್ಲಿ ಇಂತಹ ವ್ಯವಸ್ಥಿತ ಬರವಣಿಗೆಗಳು ಮಕ್ಕಳಿಗೆ ಆಶಾ ದೀಪವಾಗಿದೆ ಎ೦ದು ತಮ್ಮ ಅಭಿನಂದನಾ ಭಾಷಣದಲ್ಲಿ ಮುಖ್ಯಶಿಕ್ಷಕರಾದ ಗಿರಿಜಾನಾಥ ಕೆ ಅಭಿಪ್ರಾಯಪಟ್ಟರು. ಪ್ರೌಢ ಶಾಲಾ ಮುಖ್ಯಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್, ಕಿರಣ್ ಕೆ, ಗೀತಾ ಕೆ, ಶುಭಾಶಂಸನೆಗೈದರು. ಮಕ್ಕಳು ವಿವಿಧ ಸಂದರ್ಭಗಳಲ್ಲಿ ರಚಿಸಿದ ಕೃತಿಗಳನ್ನು ತಿದ್ದಿ ಬರೆಯಲು ಅವಕಾಶ ನೀಡಿದರೆ ಒಳ್ಳೆಯ ಸಾಹಿತ್ಯಗಳು ಉಂಟಾಗುತ್ತವೆ, ಆದುದರಿಂದ ಇಂತಹ ಸಾಹಿತ್ತಿಕ ರಚನೆಗಳ ಸೃಷ್ಚಿಗೆ ಅನುವುಮಾಡಿ ಅವುಗಳನ್ನು ಕ್ರೋಢೀಕರಿಸಬೇಕೆಂದು ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಕೆ ಸೂಚಿಸಿದರು.ಹಸ್ತ ಪತ್ರಿಕೆಯ ಪ್ರಧಾನ ಸಂಪಾದಕ ಪ್ರದೀಪ್ ಕೆ ಸ್ವಾಗತಿಸಿ, ಧನ್ಯಶ್ರೀ ವಂದಿಸಿದಳು.ಸಾಹಿತ್ಯ ರಸಪ್ರಶ್ನೆಯಲ್ಲಿ ತೃತೀಯ ಬಹುಮಾನ ಗಳಿಸಿದ ವಂದನಾ ಮತ್ತು ಚೈತ್ರಾ ತಂಡಕ್ಕೆ ಅಭಿನಂದನೆಗೈಯಲಾಯಿತು.
ದರ್ಪಣ ಹಸ್ತ ಪತ್ರಿಕೆಯ ಪ್ರಧಾನ ಸಂಪಾದಕಃ ಪ್ರದೀಪ್ ಕೆ.
ಸಂಪಾದಕ ಮಂಡಳಿ ಸದಸ್ಯರುಃ 
ಚಿತ್ರ ಎಂ, ಧನ್ಯ,ಕಮರುಬಾನ್,ಕೃಷ್ಣಪ್ರಸಾದ, ಮನೋಜ್ ಪಿ.ಜಿ, ಲಾವಣ್ಯ ಮತ್ತು ಸುಶ್ಮಿತಾ.

 

12 Nov 2014

Science Fair 2014-15


ಯಕ್ಷಿತಾ ಮತ್ತು ಕೃಷ್ಣ ಪ್ರಸಾದ್ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್

3 Nov 2014

പ്രവൃത്തി പരിചയ മേള .2014-15.


പ്രവൃത്തി പരിചയ മേള 2014-15 നു വേണ്ടിയുള്ള തയ്യാറെടുപ്പുകൾ,പരിശീലനങ്ങൾ നടത്തിവരുന്നു

31 Oct 2014

വാക്സിനേഷൻ

      സ്കൂളിലെ അഞ്ചാം ക്ലാസിലെ മുഴുവൻ വിദ്യാര്തികൾക്കും ടി. ടി . വാക്സിനും ഒമ്പതാം ക്ലാസിലെ പെണ്‍കുട്ടികൾക്ക് റുബെല്ലാ   വാക്സിനും നല്കി.പുത്തിഗെ പ്രൈമറി ഹെൽത്ത് സെന്ററിലെ മെഡിക്കൽ ഓഫീസറും സഹ പ്രവര്ത്തകരും സേവനം അനുഷ്ഠിച്ചു.   



29 Oct 2014

സ്കൂൾകലോത്സവം

   സ്കൂൾകലോത്സവം 29-10-2014 ന് ഹൈസ്കൂൾ ഹെഡ് മാസ്റ്റർ ശ്രീ:കെ .വി.സത്യനാരായണ റാവുവിന്റെ  അധ്യക്ഷതയിൽ പി .ടി .എ.പ്രസിഡണ്ട്‌ ശ്രീ : ഗോപാലകൃഷ്ണ.എം നിർവഹിച്ചു. യോഗത്തിൽ വൈസ് പ്രസിഡണ്ട്‌ രമേശ മുകാരികണ്ടംപ്രദീപ്‌കുമാർ,  സ്റ്റാഫ്‌ സെക്രട്ടറി കിരണ്‍ മാസ്റ്റർ എന്നിവർ ആശംസ അർപ്പിച്ചു.  യു .പി. ഹെഡ്മാസ്റ്റർ ഗിരിജാനാഥ.കെ സ്വാഗതവും രാധാകൃഷ്ണ.എച്.നന്ദിയും പറഞ്ഞു. തുടർന്ന് വിദ്യാർഥികളുടെ വിവിധ കലാമത്സരങ്ങൾ അരങ്ങേറി. കലോത്സവം 30-10-2014 ന് സമാപിക്കും.   

Kalotsavam





23 Oct 2014

സാകഷരം

സാകഷരം ഉണർത്ത് സർഗാത്മക ക്യാമ്പിൽ  സ്കൂൾ ഹെഡ് മാസ്ടർ ശ്രീ : ഗിരിജ നാഥ.കെ പ്രസംഗിക്കുന്നു........




17 Oct 2014

16-10-2014
ಚಿತ್ರ ರಚನೆಯ ಶಿಬಿರ
ಸೂರಂಬೈಲು, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಒಂದು ದಿನದ ಚಿತ್ರ ರಚನೆಯ ಶಿಬಿರವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ನಿರ್ವಹಿಸಿದರು,ಜಿ.ಎಚ್.ಎಸ್.ಎಸ್. ಕುಂಬಳೆ ಶಾಲೆಯ ಚಿತ್ರ ಕಲಾ ಶಿಕ್ಷಕರಾದ ದಿವಾಕರನ್ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರ ನಡೆಸಿದರು. ಗೀತಾ ಕೆ, ಬಿನು,ಕರುಣಾಕರ ಎ,ಸಾವಿತ್ರಿ, ರಾಧಾಕೃಷ್ಣ ಭಟ್ ಮತ್ತು ರಾಜೇಶ್ ಸಹಕರಿಸಿದರು.

6 Oct 2014

CLASS PTA

After the Quarterly Examination we conducted all Class PTA in Our School.PTA Members Presided over the Programe.Teachers Kiran.K;Manon Vallayil;Shashikala.CH;Karunakara RSI are Oriented the Parents Welcome Speech by Headmaster Girijanatha.K;Vote of thanks by Teachers Prasannakumari.A;Parvathi.K;Geetha.K& Binu.P.



CLASS PTA MEETTING





4 Oct 2014

04-10-2014
ಬಕ್ರೀದ್ ಹಬ್ಬದ ಶುಭಾಶಯಗಳು

EID MUBARAK
 ಸ್ನೇಹ, ಸೌಹಾರ್ದತೆ ಮತ್ತು ವಿಶ್ವಾಸವನ್ನು ಹಂಚುವ ಬಕ್ರೀದ್ ಹಬ್ಬ ಎಲ್ಲರಿಗೂ ಮಂಗಳವನ್ನುಂಟುಮಾಡಲಿ.

 ഈദ്‌ മുബാറക്


2 Oct 2014


 
ನವರಾತ್ರಿ ಮಹೋತ್ಸವದ ಶುಭಾಶಯಗಳು.
നവരാത്രി ആശംസഗള്‍

1 Oct 2014

30-09-2014
ದಸರಾ ನಾಡಹಬ್ಬ 2014 ಆಚರಣೆ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ದಸರಾ ನಾಡಹಬ್ಬದ ಆಚರಣೆಯನ್ನು ವಿವಿಧ ಸಾಹಿತ್ತಿಕ, ಸಾಂಸ್ಕೃತಿಕ ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು. ಕಥಾರಚನೆ, ಕವಿತಾ ರಚನೆ, ಪ್ರಬಂಧ ರಚನೆ ಮತ್ತು ಚಿತ್ರ ರಚನೆ ಸ್ಪರ್ಧೆಗಳು, ಸುಂದರಿಗೆ ತಿಲಕವಿಡುವ ಸ್ಪರ್ಧೆ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳನ್ನು ಶಾಲಾ ಮಕ್ಕಳಿಗೆ ನಡೆಸಲಾಯಿತು.ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ಇಂದ್ರಜಾಲ ಪ್ರದರ್ಶನ ನಡೆಯಿತು. ಹುಟ್ಟುವಾಗಲೇ ಡೌನ್ ಸಿಂಡ್ರಂನಿಂದ ಬಾಧಿತರಾದ ಪುತ್ತೂರು ನಿವಾಸಿ ಶ್ರೀ ಸುರೇಶ್ ನಾಯಕ್ ಮತ್ತು ಎಳೆಯ ಕಲಾವಿದ ಕು.ಸಾತ್ವಿಕ್ ನಾಯಕ್ ಅತ್ಯದ್ಭುತವಾದ ಪ್ರದರ್ಶ ನೀಡಿದರು.ಸಂಚಾಲಕರಾದ ಉಮೇಶ್ ನಾಯಕ್ ಶಾಲಾ ಮಕ್ಕಳಿಗೂ ಕೆಲವು ತಂತ್ರಗಳನ್ನು ಹೇಳಿಕೊಟ್ಟರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ಸ್ವಾಗತಿಸಿ, ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಸಂಚಾಲಕಿ ಗೀತಾ ಕೆ ವಂದಿಸಿದರು.
മാജിക് ഷോ
സൂരംബയൽ:കർണാടക പുത്തൂർ സ്വദേശി  സുരേഷ് നായക് (47) സ്കൂളിൽ മാജിക്  അവതരിപ്പിച്ച് കുട്ടികളുടെ കയ്യടി നേടി .
 ചെറുപ്പത്തിലേ തന്നെ   ഡൌണ്‍സിൻഡ്രോം ബാധിച്ച അദ്ദേഹം  കഠിനപ്രയത്നത്തിലൂടെ ഇന്ദ്രജാലം പഠിച്ച് ഏവരേയും വിസ്മയിപ്പിക്കുന്ന തരത്തിൽ മാജിക് പ്രകടനം കാഴ്ചവെച്ച്‌ കുട്ടികളെയും മുതിര്ന്നവരെയും സന്തോഷിപ്പിച്ചു മുന്നേറി കൊണ്ടിരിക്കുന്നു. ലിംക ബുക്സ് ഓഫ് റികോർദ്സിൽ  ഇടം നേടിയ  ഏക ഡൌണ്‍സിൻഡ്രോം ബാധിച്ച വ്യക്തിയാണ് ഇദ്ദേഹം .
കൂടെ നാലു വയസ്സുകാരനായ മാസ്റ്റർ :സ്വാതിക് പുത്തുരിന്റെ ഇന്ദ്രജാല പ്രകടനവും ഉണ്ടായിരുന്നു .            

27 Sept 2014

27-09-2014
ದಸರಾ ನಾಡಹಬ್ಬ ಆಚರಣೆ
               ವಿದ್ಯಾರಂಗ ಕಲಾಸಾಹಿತ್ಯವೇದಿಕೆ ಸೂರಂಬೈಲು ಇದರಆಶ್ರಯದಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಸಾಹಿತ್ತಿಕ ಸಾಂಸ್ಕೃತಿಕ ಸಂಭ್ರಮದೊಂದಿಗೆ ದಿನಾಂಕ 30-09-1014 ನೇ ಮಂಗಳವಾರ ಸೂರಂಬೈಲು ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 
ಎಲ್.ಪಿ.ವಿಭಾಗ,  
ಕಥೆ ಬರೆಯುವುದು,ಕವಿತೆ ಬರೆಯುವುದು,ಚಿತ್ರ ರಚನೆ.
ಯು.ಪಿ.ವಿಭಾಗ
ಕಥೆ ಬರೆಯುವುದು,ಕವಿತೆ ಬರೆಯುವುದು,ಚಿತ್ರ ರಚನೆ.
ಹೈಸ್ಕೂಲ್ .ವಿಭಾಗ
ಕಥೆ ಬರೆಯುವುದು,ಕವಿತೆ ಬರೆಯುವುದು,ಪ್ರಬಂಧ ರಚನೆ.ಚಿತ್ರ ರಚನೆ.
ಆಟಗಳು
ಯು.ಪಿ.ವಿಭಾಗ
ಹುಡುಗರಿಗೆ, ಮಡಕೆ ಒಡೆಯುವ ಸ್ಪರ್ಧೆ.
ಯು.ಪಿ.ವಿಭಾಗ
ಹುಡುಗಿಯರಿಗೆ, ಸುಂದರಿಗೆ ತಿಲಕವಿಡುವ ಸ್ಪರ್ಧೆ.
ಹೈಸ್ಕೂಲ್ .ವಿಭಾಗ
ಹುಡುಗರಿಗೆ, ಮಡಕೆ ಒಡೆಯುವ ಸ್ಪರ್ಧೆ.
ಹುಡುಗಿಯರಿಗೆ, ಸುಂದರಿಗೆ ತಿಲಕವಿಡುವ ಸ್ಪರ್ಧೆ.
3.00 ಗಂಟೆಗೆ ಇಂದ್ರಜಾಲ ಪರ್ದರ್ಶನ ನಡೆಯುವುದು.
ನಡೆಸಿಕೊಡುವವರು ಸಾತ್ವಿಕ್ ನಾಯಕ್ ಮತ್ತು ಬಳಗ ಪುತ್ತೂರು.
ಎಲ್ಲರಿಗೂ ಸ್ವಾಗತ

26 Sept 2014

Seed Distribution

ECO CLUB

SEED DISTRIBUTION BY HEADMASTER

GIRIJANATHA.K


24 Sept 2014

Mangalyaan

ISRO ശാസ്ത്രജ്‌‌ഞര്‍ക്ക് അഭിനന്ദനങ്ങള്‍.......

 

ISRO ವಿಜ್ಞಾನಿಗಳಿಗೆ ಅಭಿನಂದನೆಗಳು.......



 

ഇന്ത്യയ്ക്കിത് അഭിമാനമുഹൂര്‍ത്തം



  ಭಾರತಕ್ಕೆ ಇಂದು ಅಭಿಮಾನದ ದಿನ


21 Sept 2014

Winners

ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೂರಂಬೈಲು ಶಾಲೆಯ ಮಕ್ಕಳು
ಕುಳತವರು ಎಡದಿಂದ ಬಲಕ್ಕೆ- ಭವ್ಯಶ್ರೀ, ಮಧುಶ್ರೀ, ಶ್ರಾವ್ಯ,ಸನಸ್ವಿ. ಯಕ್ಷಿತಾ ಮತ್ತು ರಕ್ಷಾ
ನಿಂತವರು  ಎಡದಿಂದ ಬಲಕ್ಕೆ- ಧನುಷ್ ಕುಮಾರ್, ಲಾವಣ್ಯ,ಪ್ರಜ್ಞಾ,ಪುಷ್ಪಲತಾ,ರೋಹಿತ್, ಕೃಷ್ಣಪ್ರಸಾದ್, ಸುಪ್ರೀತ್ ಮತ್ತು ವಿಜೇಶ್

17 Sept 2014

9 Sept 2014

08-09-2014
ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ನಡೆಯುವ ಮಕ್ಕಳ ಧ್ವನಿ ಕಾರ್ಯಕ್ರಮದ ಧ್ವಜ ಹಸ್ತಾಂತರ,22ನೇಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಕಾಸರಗೋಡು ವೇದಿಕೆ.
 ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಮಕ್ಕಳ ಧ್ವನಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಂದಿನ ಮಕ್ಕಳ ಧ್ವನಿ ಕಾರ್ಯಕ್ರಮ ನಡೆಸುವುದಕ್ಕಾಗಿ ಕಾಸರಗೋಡು ಜಿಲ್ಲೆಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಕೇಂದ್ರ ಅಧ್ಯಕ್ಷರಾದ ಜಯರಾಮ ಪೂಂಜಾ ರವವರು ನಿಯೋಜಿತ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ ಇವರಿಗೆ ಧ್ವಜ ಹಸ್ತಾಂತರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಂಗಮದ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ರಾವ್, ಕೇಂದ್ರ ಸಮಿತಿ ಸದಸ್ಯರೂ ಪೂರ್ವಾಧ್ಯಕ್ಷರೂ ಆದ ವಿ.ಬಿ.ಕುಳಮರ್ವ ಮತ್ತು ಕಾಸರಗೋಡು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್ ಉಪಸ್ಥಿತರಿದ್ದರು.


4 Sept 2014

സ്നേഹത്തിന്റേയും ഐശ്വര്യത്തിന്റേയും സമൃദ്ധിയുടേയും
ഓണാശംസകള്‍.......
ಓಣಂ ಹಬ್ಬದ ಶುಭಾಶಯಗಳು ….

 

3 Sept 2014


03-09-2014
ಓಣಂ ಪರೀಕ್ಷೆಯು ನಿಗದಿಯಾದಂತೆ ಅನಿವಾರ್ಯ  ಕಾರಣಗಳಿಂದ ನಡೆಯಲಿಲ್ಲ.ಅಗೋಸ್ತು 26 ,ಸೆಪ್ಟಂಬರ್ 2 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನುಕ್ರಮವಾಗಿ ಸೆಪ್ಟಂಬರ್ 17 ಮತ್ತು 18 ರಂದು ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ  ಅಗೋಸ್ತು 29 ರಂದು ನಡೆಯಬೇಕಾದ ಪರೀಕ್ಷೆಯು ಸೆಪ್ಟಂಬರ್ 19 ರಂದು ನಡೆಯಲಿದೆ.ಸಮಯ ಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ. No.QIP(1) 52870/14/DPI Dated 03-09-2014.

1 Sept 2014




ONAM GREETINGS

ഓണാശംസകൾ


26 Aug 2014

22 Aug 2014

18 Aug 2014

ಸಾಕ್ಷರ 2014 ಅಧ್ಯಾಪಕರಿಂದ ಟೀಮ್ ಟೀಚಿಂಗಿನಿಂದ  ಯಶಸ್ಸಿನತ್ತ.






ಮಕ್ಕಳ ವರ್ಕ್ ಶೀಟ್ ಗಳು ಪೂರ್ತಿಗೊಳಿಸಿದಾಗ.