29 Jan 2015

New Class Room




സ്കൂളിൽ ഒരുപുതിയ ക്ലാസ് റൂമിന്റെ നിർമാണം പുരോഗമിക്കുന്നു   



New Class Room under Construction 



26 Jan 2015


റിപ്പബ്ലിക് ദിനം


ഇന്ത്യ മഹാരാജ്യത്തിന്റെ 66 മത് റിപ്പബ്ലിക് ദിനം സ്കൂളിൽ സമുചിതമായി ആചരിച്ചു.അസംബ്ലിയിൽ അദ്യാപകരും വിദ്യാര്തികളും രക്ഷിതാക്കളും 

സംബമ്ന്ധിച്ചു .വാര്ഡ് മെമ്പർ ഹരിണി.ജി.കെ.നായിക് പതാക ഉയർത്തി പി.ടി.എ പ്രസിഡണ്ട്‌ ശ്രീ:ഗോപാലകൃഷ്ണ.പെർദനെ,ഹൈസ്കൂൾ  ഹെഡ് 

മാസ്സ്ടർ സത്യനാരായണ റാവു.കെ.വി,യു.പി.ഹെഡ്മാസ്റർ ഗിരിജനാദ.കെ,എന്നിവർ സംസാരിച്ചു.  വാർഡ്‌ മെമ്പർ , പി.ടി.എ പ്രസിഡണ്ട്‌ എന്നിവർ ചേർന്ന് യുണിഫോം വിതരണം നിർവഹിച്ചു. 






ಸೂರಂಬೈಲು ಶಾಲೆಯಲ್ಲಿ ಗಣರಾಜ್ಯೋತ್ಸವ.
66 ನೇ ಗಣರಾಜ್ಯೋತ್ಸವ

ದೇಶ ಪ್ರೇಮವನ್ನು ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು , ದೇಶವನ್ನು ಕಟ್ಟಿ ಬೆಳಗಬೇಕಾದರೆ ಉತ್ತಮ ಸಮಾಜದಿಂದ ಮಾತ್ರ ಸಾಧ್ಯ. ಆದುದರಿಂದ ಇಂತಹ ರಾಷ್ಟ್ರ ಪ್ರೇಮವನ್ನು ಮೂಡಿಸುವ ರಾಷ್ಟ್ರೀಯ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು; ಎ೦ದು ಪುತ್ತಿಗೆ ಪಂಚಾಯತಿನ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಧ್ವಜಾರೋಹಣಗೈದು ಮಾತನಾಡುತ್ತಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪೆರ್ಣೆ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ರಾವ್ ಕೆ.ವಿ, ಸುಬ್ರಹ್ಮಣ್ಯ ಭಟ್ ಕೆ, ಕಿರಣ್,ಶಕುಂತಲಾ, ಪ್ರಸನ್ನಕುಮಾರಿ,ಸಾವಿತ್ರಿ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ ಸ್ಟಾಫ್ ಸೆಕ್ರೆಟರಿ ಕಿರಣ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಮಕ್ಕಳಿಂದ ಭಾಷಣ, ಡಯಟ್ ಶಿಕ್ಷಣ ಸಂಸ್ಥೆಯ ಶಿಕ್ಷಕ ತರಬೇತಿ ಅಧ್ಯಾಪಕರಿಂದ ದೇಶಭಕ್ತಿ ಗಾಯನ ನಡೆಯಿತು. ಎಲ್ಲರಿಗೂ ಸಿಹಿತಿಂಡಿ ವಿತರಣೆಯಾಯಿತು.


21 Jan 2015

Metric Mela

Metric Mela

മെട്രിക് മേള 2014-15.
കുട്ടികൾക്ക് അളവ്,തൂക്കം,സമയം,എന്നിവയെ കുറിച്ച് ധാരണ ഉണ്ടാക്കുന്നതിനു സ്കൂൾ തലത്തിൽ മെട്രിക് മേള സംഘടിപ്പിച്ചു.

ಮೆಟ್ರಿಕ್ ಮೇಳ 2014-15
ಸೂರಂಬೈಲು ಶಾಲೆಯ ಗಣಿತ ಕ್ಲಬ್ಬಿನ ವತಿಯಿಂದ ಶಾಲೆಯಲ್ಲಿ ಮೆಟ್ರಿಕ್ ಮೇಳ ನಡೆಯಿತು. ಗಣಿತದ ಪ್ರಾಯೋಗಿಕ ಅನುಭವಗಳನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಮೆಟ್ರಿಕ್ ಮೇಳ ಎಂಬ ಕಾರ್ಯಕ್ರಮವನ್ನು ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗಾಗಿ ಏರ್ಪಡಿಸಲಾಯಿತು.ಉದ್ದ, ಭಾರ, ಸಮಯ, ಗಾತ್ರ, ರೂಪಾಯಿ-ನಾಣ್ಯ ಇವೇ ಮೊದಲಾದವುಗಳ ಕುರಿತು ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ಎಲ್ಲಾ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು. ಶಕುಂತಲಾ ಟೀಚರ್ ಮತ್ತು ಕರುಣಾಕರ ರೈ ಇವರು  ನೇತೃತ್ವ ವಹಿಸಿದರು. ಪ್ರಸನ್ನಕುಮಾರಿ ಎ ಮತ್ತು ಸಾವಿತ್ರಿ ಸಹಕರಿಸಿದರು. 




ನಮ್ಮ ಚೀಲ ಅಳತೆಯನ್ನು ತಿಳಿಯುವ ಕುತೂಹಲ
ಭಾರದ ಪ್ರಾಯೋಗಿಕ ತಿಳುವಳಿಕೆ ಪ್ರಯತ್ನ

20 Jan 2015

       റണ്‍ കേരള റണ്‍

       സൂരംബയൽ:ജി.എച്.എസ്.സൂരംബയൽ, ജി .എസ്ബി.എസ് സൂരംബയൽ  സംയുക്തമായി റണ്‍ കേരള റണ്‍ ദേശീയ ഗെയിംസിന്റെ ഭാഗമായി പുതിഗെ ഗ്രാമ പഞ്ചായത്തിലെ സൂരംബയലിൽ വിദ്യാർഥികൾ,അധ്യാപകർ,അധ്യാപക വിധ്യാര്തികൾ (ഡയറ്റു മായിപ്പാടി ) രക്ഷിതാക്കൾ,ജനപ്രതിനിധി (ഹരിണി. ജി.കെ.നായക് )തുടങ്ങിയവർ നേതൃതം നല്കി.വാർഡുമെമ്പർ   ശ്രീമതി :   ഹരിണി ജി .കെ .നായക് ഫ്ലാഗ് ഓഫ്‌ ചെയ്തു.(വെൽഫെർ സ്ടാണ്ടിംഗ് കമ്മറ്റി ചെയര് പെര്സണ്‍ ) ഹൈ സ്കൂൾ ഹെഡ്മാസ്റർ സത്യനാരായണ റാവു.കെ.വി പ്രതിക്ജ ചൊല്ലികൊടുത്തു ,യു.പി ഹെഡ്മാസ്റർ ഗിരിജനാധ കെ ,മനോജ്‌ വല്ലയിൽ ,രവിരാജ്,ബിനു. പി,ഇസ്മായിൽ.കെ.കെ എന്നിവർ നേതൃതം നല്കി


ರನ್ ಕೇರಳ ರನ್
ಮೂವತ್ತೈದನೇ ರಾಷ್ಟ್ರೀ ಕ್ರೀಡಾ ಕೂಟದ ಅಂಗವಾಗಿ ರಾಜ್ಯದಾದ್ಯಂತ ನಡೆದ ರನ್ ಕೇರಳ ರನ್ ಕಾರ್ಯಕ್ರಮ ಸೂರಂಬೈಲು ಶಾಲೆಯಲ್ಲಿ ನಡೆಯಿತು. ವಾರ್ಡ್ ಸದಸ್ಯರಾದ ಹರಿಣಿ ಜಿ.ಕೆ.ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ರಾವ್, ಯು.ಪಿ.ಶಾಲಾ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಡಯಟ್ ಟೀಚರ್ ಎಜ್ಯುಕೇಟರ್ ಪುಷ್ಪ ಮೊದಲಾದವರು ಉಪಸ್ಥಿತರಿದ್ದರು.


   

16 Jan 2015

ക്ലാസ്പി.ടി.എ

ക്ലാസ്പി.ടി.എ

             പാദ വര്ഷ പരീക്ഷ കഴിഞ്ഞു എല്ലാ ക്ലാസിലും ക്ലാസ്പി.ടി.എ നടത്തി എൽ.പി.മലയാളം,കന്നഡ യു.പി മലയാളം,കന്നഡ മീഡിയത്തിൽ സംയുക്തമായി നടത്തിയ യോഗത്തിൽ 75% രക്ഷിതാക്കളും സംബന്ധിച്ചു.രക്ഷിതാക്കൾ അദ്യക്ഷത വഹിച്ചു.വിദ്യാർഥികൾ സ്വാഗതം ആശംശിച്ചു ഹെട്മാസ്ടർ ഗിരിജ നാഥ.കെ സംസാരിച്ചു.പ്രോഗ്രസ് കാർഡ് വിതരണം ചെയ്തു.  

    സുബ്രമണ്യ ഭട്ട്,ശശികല.സി. എച്,പ്രസന്നകുമാരി.എ,സാവിത്രി.ബി,
മനോജ്‌ വല്ലയിൽ,ബിനു.പി,ഗീത.കെ,കിരണ്‍.കെ എന്നിവർ സംസാരിച്ചു.
ಮಕ್ಕಳ ಕಲಿಕಾಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಹಿರಿದು.

ಮಕ್ಕಳ ಕಲಿಕಾಭಿವೃದ್ಧಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಪಾತ್ರ ಹಿರಿದು. ಇಂದಿನ ಕಲಿಕಾ ವಿಧಾನ, ಮೌಲ್ಯಮಾಪನ ವಿಧಾನದಗಳಲ್ಲಿ ಅಧ್ಯಾಪಕರಿಂದ ಮಾತ್ರ ಮಕ್ಕಳ ಕಲಿಕಾಭಿವೃದ್ಧಿ ನಿರೀಕ್ಷಿಸುವುದು ಸರಿಯಲ್ಲ, ಮಕ್ಕಳ ನಿರಂತರ ಮೌಲ್ಯಮಾಪನಕ್ಕೆ ರಕ್ಷಕರ ಬೆಂಬಲ ಪೂರಕವಾಗಿರುತ್ತದೆ, ಆದುದರಿಂದ ಎರಡು ತಿಂಗಳಿಗೊಮ್ಮೆಯಾದರೂ ಪ್ರತಿಯೊಬ್ಬ ರಕ್ಷಕರೂ ಶಾಲೆಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಕುರಿತು ಸಮಾಲೋಚನೆ ಮಾಡಬೇಕು ಎ೦ದು ಶ್ರೀ ಐತ್ತಪ್ಪ ಕುಲಾಲ್ ಹೇಳಿದರು. ಅವರು ಸೂರಂಬೈಲು ಶಾಲೆಯ ಸಿ.ಪಿ.ಟಿ.. ಸಂಯುಕ್ತ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಸುಹಾಸಿನಿ, ಹೇಮಾವತಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಸುಜಾತ ಪೆರ್ಣೆ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಶಾಲಾ ಸಂಹಿತೆಯ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಭಟ್ ಕೆ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.ಪಾರ್ವತಿ ಕೆ, ಪ್ರಸನ್ನ ಕುಮಾರಿ, ಸಾವಿತ್ರಿ, ಶಕುಂತಲಾ ಮತ್ತು ಕರುಣಾಕರ ರೈ ಉಪಸ್ಥಿತರಿದ್ದರು.ಶಶಿಕಲಾ ಕೆ ವಂದಿಸಿದರು. ಮಕ್ಕಳ ಸೃಷ್ಠಿಗಳ ಪ್ರದರ್ಶನ ಮತ್ತು ಮನೋರಂಜನೆ ಕಾರ್ಯಕ್ರಮಗಳು ಜರಗಿದವು.ಇತ್ತೀಚೆಗೆ ಕೋಟದಲ್ಲಿ ಜರಗಿದ ಮಕ್ಕಳ ನಾಟಕೋತ್ಸವದಲ್ಲಿ ಭಾಗವಹಿಸಿದ ಮಕ್ಕಳನ್ನು ಸಿ.ಪಿ.ಟಿ..ವತಿಯಿಂದ ಅಭಿನಂದನೆಗೈಯಲಾಯಿತು.ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ಮಲಯಾಳ ಮತ್ತು ಕನ್ನಡ ವಿಭಾಗಳ ಪ್ರತ್ಯೇಕ ಪ್ರತ್ಯೇಕ ಸಭೆ ನಡೆಯಿತು.ಮನೋಜ್ ವೆಳ್ಳೆಯಿಲ್, ಬಿನು, ಕಿರಣ್ ಕುಮಾರ್ ಗೀತಾ ಮೊದಲಾದವರು ಮಲಯಾಳ ವಿಭಾಗದಲ್ಲಿ ನೇತೃತ್ವ ವಹಿಸಿದ್ದರು.




13 Jan 2015

Spark Employee ID Distribution

Spark Employee ID Distribution

സ്പാർക്ക് ഐ .ഡി.വിതരണം 

സ്കൂളിലെ മുഴുവൻ ജീവനക്കാര്ക്കും സ്പാർക്ക് പ്രകാരമുള്ള ഐഡന്റിറ്റി കാര്ഡ് വിതരണം ചെയ്തു .ഹെഡ് മാസ്റർ ശ്രീ :ഗിരിജ നാഥ.കെ സ്റ്റാഫ് സെക്രെട്ടറി കിരണ്‍ മാസ്റെർക്ക് ഐ .ഡി നല്കികൊണ്ട് സംസാരിച്ചു. 




   

6 Jan 2015

മുട്ട ക്കോഴി  വിതരണം      


      06/01/2015 പുതിഗെ ഗ്രാമ പഞ്ചായത്തിന്റെയും മൃഗസംരക്ഷണ വകുപ്പിന്റെയും ആഭിമുക്യത്തിൽ വിദ്യാലയത്തിൽ നിന്ന് തെരഞ്ഞെടുക്കപ്പെട്ട 50 വിദ്യാര്തികൾക്ക് 5 വീതം മുട്ട ക്കോഴി, 3 കിലോ വീതം കോഴിത്തീറ്റ, പ്രതിരോധ മരുന്ന് ,ഡയറി, പേന എന്നിവ വിതരണം ചെയ്യ്തു.ചടങ്ങിൽ പുതിഗെ പഞ്ചായത്ത്‌ പ്രസിഡണ്ട്‌ ശ്രീ :ചാനിയ പാടി വിതരണം നിർവഹിച്ചു വാര്ഡ് മെമ്പർ ശ്രീമതി :ഹരിണി ജി.കെ നായക്ക് ആദ്യക്ഷത വഹിച്ചു ,ആരോഗ്യ വിദ്യാഭാസ സ്റാന്റിംഗ് കമ്മറ്റി ചെയർമാൻ ജയന്ത പാട്ടാളി,പി .ടി.എ പ്രസിഡണ്ട്‌ ഗോപാലകൃഷ്ണ പെര്നെ എന്നിവര് സംസാരിച്ചു .ഹെട്മാസ്ടർ ഗിരിജാ നാഥ.കെ സ്വാഗതവും കിരണ്‍ മാസ്റർ നന്നിയും പറഞ്ഞു .

ಸೂರಂಬೈಲು ಶಾಲಾ ಮಕ್ಕಳಿಗೆ ಮೃಗ ಸಂರಕ್ಷಣಾ ಇಲಾಖೆಯ ವತಿಯಿಂದ ಮೊಟ್ಟೆಕೋಳಿ ವಿತರಣೆ 


           ಸೂರಂಬೈಲು,ಜನವರಿ 6- ಶಾಲಾಮಕ್ಕಳಿಗೆ ಪೋಷಕಾಹಾರ ವಿತರಣೆ ಮತ್ತು ಕೋಳಿಸಾಕಣೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ತಿಳುವಳಿಕೆ ಮೂಡಿಸುವ ತರಗತಿ ನಡೆಯಿತು.ಮೃಗಸಂರಕ್ಷಣಾ ಇಲಾಖೆಯ ವತಿಯಿಂದ ಆಯ್ದ ಐವತ್ತು ಮಂದಿ ಮಕ್ಕಳಿಗೆ ಮೊಟ್ಟೆಕೋಳಿಗಳನ್ನು, ಅವುಗಳಿಗೆ ತಿನಿಸುವ ಆಹಾರ ಮತ್ತು ಪ್ರತಿರೋಧ ಔಷಧಗಳನ್ನು ನೀಡಿ ಮಕ್ಕಳಿಗೆ ತಿಳುವಳಿಕೆಯ ತರಗತಿ ನಡೆಯಿತು. ಫಲಾನುಭವಿ ಮಕ್ಕಳ ಹೆತ್ತವರಿಗೆ ಕೋಳಿಸಾಕಣೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನಿಯ ಪಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಹರಿಣಿ ಜಿ ಕೆ. ನಾಯಕ್, ಜಯಂತ ಪಾಟಾಳಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಶರಾದ ಗೋಪಾಲಕೃಷ್ಣ ಪೆರ್ಣೆ, ಮುಖ್ಯಶಿಕ್ಷಕರಾದ ಗಿರಿಜಾನಾಥ ಕೆ, ಸ್ಟಾಫ್ ಸೆಕ್ರೆಟರಿ ಕಿರಣ್, ಕರುಣಾಕರ ರೈ , ಶಶಿಕಲಾ ಕೆ, ಲಲಿತಾ,ಮನೋಜ್ ಮೊದಲಾದವರು ಉಪಸ್ಥಿತರಿದ್ದರು. ಮೃಗಸಂರಕ್ಷಣಾ ಇಲಾಖೆಯಿಂದ ಬಂದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

 

4 Jan 2015


04-01-2015

ಮಕ್ಕಳ ಸಾಹಿತ್ಯ ಸಂಗಮ
ಜಿಲ್ಲಾ ಮಕ್ಕಳ ನಾಟಕೋತ್ಸವ ೨೦೧೫

ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಇದರ ಆಶ್ರಯದಲ್ಲಿ ಕೋಟ ವಿದ್ಯಾಸಂಸ್ಥೆ ಕೋಟ ಮತ್ತು ಗೀತಾನಂದ ಫೌಂಡೇಶನ್ ಪಡುಕೆರೆ ಇವುಗಳ ಸಹಯೋಗದಲ್ಲಿ ಸ್ವರ್ಣ ಭವನ,ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದಲ್ಲಿ ನಡೆದ ನಾಟಕೋತ್ಸವದಲ್ಲಿ ಜಿ.ಎಸ್.ಬಿ.ಎಸ್. ಸೂರಂಬೈಲು ಶಾಲೆಯ ಮಕ್ಕಳು ""ಪಾಠ ೧ ಮೀನಾಕ್ಷಿ'' ಎ೦ಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. ಯಕ್ಷಿತಾ, ರೋಹಿತ್, ರಕ್ಷಾ, ರಂಜಿತ್, ಕೃಷ್ಣಪ್ರಸಾದ್, ಭವ್ಯಶ್ರೀ, ಪ್ರಜ್ಞಾ, ಸುಪ್ರೀತ್,ರೇಶ್ಮಾ ಮತ್ತು ರೋಹಿತ್ ಕುಮಾರ್ ಭಾಗವಹಿಸಿದರು. ಸದಾಶಿವ ಪೆರ್ಮುದೆ ನಾಟಕ ರಚಿಸಿ ನಿರ್ದೇಶಿದ್ದರು.





1 Jan 2015


          ഇന്ന് വിദ്യാലയത്തിലെ മുഴുവൻ ക്ലാസുകളിലും വിദ്യാർത്ഥികൾക്ക് മധുരം(കേക്ക് ) വിതരണം ചെയ്തുകൊണ്ട് പുതുവര്സരം ആഘോഷിച്ചു .ഒന്നാം ക്ലാസിൽ നടന്ന ചടങ്ങിൽ പി ടി എ പ്രസിഡണ്ട്‌ ശ്രീ .ഗോപാല പെർദനെ ,ഹെഡ് മാസ്റർ ഗിരിജാ നാഥ.കെ ,സ്റ്റാഫ്‌ സെക്രെടറി കിരണ്‍ .കെ , ക്ലാസ് ടീച്ചർമാർ സാവിത്രി.ബി,സൌദത്.കെ പി, മനോജ്‌ വല്ലയിൽ ,കരുണാകര റായ്,ബിനു.പി ,ഇസ്മായിൽ .കെ കെ  എന്നിവരും സംബന്ദിച്ചു.