25 Jul 2015


15-07-2015
ಸಮವಸ್ತ್ರ ವಿತರಣೆ.
ಸೂರಂಬೈಲುಃ ಜು.25, ಶಾಲೆಯ ಚಟುವಟಿಕೆಗಳು ಮಕ್ಕಳಿಗೆ ಫಲಪ್ರದವಾಗಿ ಸಿಗಬೇಕಾದರೆ ಹೆತ್ತವರ ಸಹಕಾರ ಅತೀ ಅಗತ್ಯವಾಗಿದೆ.ಇಂದಿನ ಕಲಿಕಾ ಪದ್ಧತಿಯಲ್ಲಿ ಮಕ್ಕಳಿಗೆ ಅನುಭವವೇ ಶಿಕ್ಷಣವಾಗಿದೆ. ಇಂತಹ ಕಲಿಕೆ ಅನುಭವವನ್ನು ನೀಡುವಲ್ಲಿ ಶಾಲೆಯು ಸಫಲವಾಗಬೇಕಾದರೆ ರಕ್ಷಕರು ಶಾಲೆಯ ಚಟುವಟಿಕೆಗಳಿಗೆ ಪೂರಕವಾದ ವಿಚಾರಗಳನ್ನು ಒದಗಿಸಲು ಮಂದಾಗಬೇಕು. ಇದಕ್ಕಾಗಿ ತರಗತಿ ರಕ್ಷಕರ ಸಭೆಯು ಅನಿವಾರ್ಯವಾಗಿದೆ. ಘಟಕ ಮೌಲ್ಯಮಾಪನ, ನಿರಂತರ ಮೌಲ್ಯನಿರ್ಣಯಗಳಿಗೆ ಪೂರಕ ಮಾಹಿತಿ ಕಲೆಹಾಕಲು ಅನಿವಾರ್ಯವಾಗಿರುವ ಇಂತಹ ಸಭೆಗಳಲ್ಲಿ ರಕ್ಷಕರು ಭಾಗವಹಿಸಬೇಕು ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನೀಡುವ ಸಮವಸ್ತ್ರ ವಿತರಣೆ ಮತ್ತು ತರಗತಿ ರಕ್ಷಕರ ಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು. ಎ೦.ಪಿ.ಟಿ.. ಅಧ್ಯಕ್ಷೆ ಸುಜಾತ ಪೆರ್ಣೆ, ದಯಾನಂದ ಪೆರ್ಣೆ, ರಮೇಶ ಮುಖಾರಿಕಂಡ,ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ಕಿರಣ್ ಉಪಸ್ಥಿತರಿದ್ದರು. ಮನೋಜ್ ವಿ ಮತ್ತು ಸುಬ್ರಹ್ಮಣ್ಯ ಭಟ್ ಕೆ ತರಗತಿ ಪಿ.ಟಿ..ಯ ಕುರಿತು ಆಶಯ ಭಾಷಣ ಮಾಡಿದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ, ಸ್ಟಾಫ್ ಸೆಕ್ರಟರಿ ಶಶಿಕಲಾ ಸಿ.ಎಚ್. ವಂದಿಸಿದರು.ನಂತರ ಪ್ರತಿ ತರಗತಿಗಳಲ್ಲಿ ರಕ್ಷಕರ ಸಭೆ ನಡೆಯಿತು. ಅಧ್ಯಕ್ಷರ ಸಹಿತ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



No comments:

Post a Comment