16 Jan 2015

ക്ലാസ്പി.ടി.എ

ക്ലാസ്പി.ടി.എ

             പാദ വര്ഷ പരീക്ഷ കഴിഞ്ഞു എല്ലാ ക്ലാസിലും ക്ലാസ്പി.ടി.എ നടത്തി എൽ.പി.മലയാളം,കന്നഡ യു.പി മലയാളം,കന്നഡ മീഡിയത്തിൽ സംയുക്തമായി നടത്തിയ യോഗത്തിൽ 75% രക്ഷിതാക്കളും സംബന്ധിച്ചു.രക്ഷിതാക്കൾ അദ്യക്ഷത വഹിച്ചു.വിദ്യാർഥികൾ സ്വാഗതം ആശംശിച്ചു ഹെട്മാസ്ടർ ഗിരിജ നാഥ.കെ സംസാരിച്ചു.പ്രോഗ്രസ് കാർഡ് വിതരണം ചെയ്തു.  

    സുബ്രമണ്യ ഭട്ട്,ശശികല.സി. എച്,പ്രസന്നകുമാരി.എ,സാവിത്രി.ബി,
മനോജ്‌ വല്ലയിൽ,ബിനു.പി,ഗീത.കെ,കിരണ്‍.കെ എന്നിവർ സംസാരിച്ചു.
ಮಕ್ಕಳ ಕಲಿಕಾಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಹಿರಿದು.

ಮಕ್ಕಳ ಕಲಿಕಾಭಿವೃದ್ಧಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಪಾತ್ರ ಹಿರಿದು. ಇಂದಿನ ಕಲಿಕಾ ವಿಧಾನ, ಮೌಲ್ಯಮಾಪನ ವಿಧಾನದಗಳಲ್ಲಿ ಅಧ್ಯಾಪಕರಿಂದ ಮಾತ್ರ ಮಕ್ಕಳ ಕಲಿಕಾಭಿವೃದ್ಧಿ ನಿರೀಕ್ಷಿಸುವುದು ಸರಿಯಲ್ಲ, ಮಕ್ಕಳ ನಿರಂತರ ಮೌಲ್ಯಮಾಪನಕ್ಕೆ ರಕ್ಷಕರ ಬೆಂಬಲ ಪೂರಕವಾಗಿರುತ್ತದೆ, ಆದುದರಿಂದ ಎರಡು ತಿಂಗಳಿಗೊಮ್ಮೆಯಾದರೂ ಪ್ರತಿಯೊಬ್ಬ ರಕ್ಷಕರೂ ಶಾಲೆಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಕುರಿತು ಸಮಾಲೋಚನೆ ಮಾಡಬೇಕು ಎ೦ದು ಶ್ರೀ ಐತ್ತಪ್ಪ ಕುಲಾಲ್ ಹೇಳಿದರು. ಅವರು ಸೂರಂಬೈಲು ಶಾಲೆಯ ಸಿ.ಪಿ.ಟಿ.. ಸಂಯುಕ್ತ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಸುಹಾಸಿನಿ, ಹೇಮಾವತಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಸುಜಾತ ಪೆರ್ಣೆ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಶಾಲಾ ಸಂಹಿತೆಯ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಭಟ್ ಕೆ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.ಪಾರ್ವತಿ ಕೆ, ಪ್ರಸನ್ನ ಕುಮಾರಿ, ಸಾವಿತ್ರಿ, ಶಕುಂತಲಾ ಮತ್ತು ಕರುಣಾಕರ ರೈ ಉಪಸ್ಥಿತರಿದ್ದರು.ಶಶಿಕಲಾ ಕೆ ವಂದಿಸಿದರು. ಮಕ್ಕಳ ಸೃಷ್ಠಿಗಳ ಪ್ರದರ್ಶನ ಮತ್ತು ಮನೋರಂಜನೆ ಕಾರ್ಯಕ್ರಮಗಳು ಜರಗಿದವು.ಇತ್ತೀಚೆಗೆ ಕೋಟದಲ್ಲಿ ಜರಗಿದ ಮಕ್ಕಳ ನಾಟಕೋತ್ಸವದಲ್ಲಿ ಭಾಗವಹಿಸಿದ ಮಕ್ಕಳನ್ನು ಸಿ.ಪಿ.ಟಿ..ವತಿಯಿಂದ ಅಭಿನಂದನೆಗೈಯಲಾಯಿತು.ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ಮಲಯಾಳ ಮತ್ತು ಕನ್ನಡ ವಿಭಾಗಳ ಪ್ರತ್ಯೇಕ ಪ್ರತ್ಯೇಕ ಸಭೆ ನಡೆಯಿತು.ಮನೋಜ್ ವೆಳ್ಳೆಯಿಲ್, ಬಿನು, ಕಿರಣ್ ಕುಮಾರ್ ಗೀತಾ ಮೊದಲಾದವರು ಮಲಯಾಳ ವಿಭಾಗದಲ್ಲಿ ನೇತೃತ್ವ ವಹಿಸಿದ್ದರು.




No comments:

Post a Comment