26 Jan 2015

റിപ്പബ്ലിക് ദിനം


ഇന്ത്യ മഹാരാജ്യത്തിന്റെ 66 മത് റിപ്പബ്ലിക് ദിനം സ്കൂളിൽ സമുചിതമായി ആചരിച്ചു.അസംബ്ലിയിൽ അദ്യാപകരും വിദ്യാര്തികളും രക്ഷിതാക്കളും 

സംബമ്ന്ധിച്ചു .വാര്ഡ് മെമ്പർ ഹരിണി.ജി.കെ.നായിക് പതാക ഉയർത്തി പി.ടി.എ പ്രസിഡണ്ട്‌ ശ്രീ:ഗോപാലകൃഷ്ണ.പെർദനെ,ഹൈസ്കൂൾ  ഹെഡ് 

മാസ്സ്ടർ സത്യനാരായണ റാവു.കെ.വി,യു.പി.ഹെഡ്മാസ്റർ ഗിരിജനാദ.കെ,എന്നിവർ സംസാരിച്ചു.  വാർഡ്‌ മെമ്പർ , പി.ടി.എ പ്രസിഡണ്ട്‌ എന്നിവർ ചേർന്ന് യുണിഫോം വിതരണം നിർവഹിച്ചു. 






ಸೂರಂಬೈಲು ಶಾಲೆಯಲ್ಲಿ ಗಣರಾಜ್ಯೋತ್ಸವ.
66 ನೇ ಗಣರಾಜ್ಯೋತ್ಸವ

ದೇಶ ಪ್ರೇಮವನ್ನು ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು , ದೇಶವನ್ನು ಕಟ್ಟಿ ಬೆಳಗಬೇಕಾದರೆ ಉತ್ತಮ ಸಮಾಜದಿಂದ ಮಾತ್ರ ಸಾಧ್ಯ. ಆದುದರಿಂದ ಇಂತಹ ರಾಷ್ಟ್ರ ಪ್ರೇಮವನ್ನು ಮೂಡಿಸುವ ರಾಷ್ಟ್ರೀಯ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು; ಎ೦ದು ಪುತ್ತಿಗೆ ಪಂಚಾಯತಿನ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಧ್ವಜಾರೋಹಣಗೈದು ಮಾತನಾಡುತ್ತಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪೆರ್ಣೆ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ರಾವ್ ಕೆ.ವಿ, ಸುಬ್ರಹ್ಮಣ್ಯ ಭಟ್ ಕೆ, ಕಿರಣ್,ಶಕುಂತಲಾ, ಪ್ರಸನ್ನಕುಮಾರಿ,ಸಾವಿತ್ರಿ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ ಸ್ಟಾಫ್ ಸೆಕ್ರೆಟರಿ ಕಿರಣ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಮಕ್ಕಳಿಂದ ಭಾಷಣ, ಡಯಟ್ ಶಿಕ್ಷಣ ಸಂಸ್ಥೆಯ ಶಿಕ್ಷಕ ತರಬೇತಿ ಅಧ್ಯಾಪಕರಿಂದ ದೇಶಭಕ್ತಿ ಗಾಯನ ನಡೆಯಿತು. ಎಲ್ಲರಿಗೂ ಸಿಹಿತಿಂಡಿ ವಿತರಣೆಯಾಯಿತು.


No comments:

Post a Comment